Latestಕ್ರೈಂಮಂಗಳೂರು

ಗೂಡಂಗಡಿಯಲ್ಲಿ ಗಾಂಜಾ ಸುವಾಸನೆಯುಳ್ಳ ಚಾಕಲೇಟ್‌ ಮಾರಾಟ, ಅಬಕಾರಿ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ, ಓರ್ವನ ಬಂಧನ

1.2k

ನ್ಯೂಸ್‌ ನಾಟೌಟ್‌: ಗಾಂಜಾ ಸುವಾಸನೆಯುಳ್ಳ ಚಾಕಲೇಟ್‌ಗಳನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಪಂಪ್‌ವೆಲ್‌ ಸಮೀಪದ ಪಾನ್‌ ಗೂಡಂಗಡಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಉತ್ತರ ಪ್ರದೇಶ ಮೂಲದ ಸುಜಿತ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಆರೋಪಿ ಸುಜಿತ್‌ನಿಂದ 303 ಗ್ರಾಂ ತೂಕದ ಬಮ್‌ಚಾರ್‌ ಮಿನಾರ್‌ ಹೆಸರಿನ ಮಾದಕ ದ್ರವ್ಯದ ವಾಸನೆಯುಳ್ಳ ಚಾಕಲೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಎನ್‌ಡಿಪಿಎಸ್‌ ಕಾಯ್ದೆಯಡಿ ಕೇಸು ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆ ಮಂಗಳೂರು ಉತ್ತರ ವಿಭಾಗ ಉಪ ಅಧೀಕ್ಷಕ ಗಾಯತ್ರಿ ಸಿ.ಎಚ್‌. ನೇತೃತ್ವದಲ್ಲಿ ಮಂಗಳೂರು ಉತ್ತರ ಉಪವಿಭಾಗ ಉಪನಿರೀಕ್ಷಕ ಸುಧೀರ್‌ ಕುಮಾರ್‌ ಪ್ರಕರಣ ದಾಖಲಿಸಿದ್ದಾರೆ. ನಿರೀಕ್ಷಕಿ ಸುನೀತಾ, ಉಪನಿರೀಕ್ಷಕ ಹರೀಶ್‌, ಸಿಬಂದಿ ಸಂಧ್ಯಾ ಹಾಗೂ ಚಾಲಕ ಹರೀಶ, ಕಾನ್‌ಸ್ಟೆಬಲ್‌ ಮಾರುತಿ ಡಿ.ಜೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

See also  ಬ್ಯಾಗ್ ಕಳ್ಳನಿಂದ ಪತ್ನಿಯನ್ನು ರಕ್ಷಿಸಲು ಹೋಗಿ ಕೈ ಕಳೆದುಕೊಂಡ ವೈದ್ಯ..! ಸಿನಿಮೀಯ ಘಟನೆಯಲ್ಲಿ ದಂಪತಿ ಪಾರಾಗಿದ್ದೇ ರೋಚಕ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget