ಕರಾವಳಿ

ಕ್ಯಾನ್ಸರ್ ರೋಗ ಬರುವುದು ಹೇಗೆ? ಅದನ್ನು ಹೇಗೆ ತಡೆಗಟ್ಟಬಹುದು?

ನ್ಯೂಸ್ ನಾಟೌಟ್: ಕ್ಯಾನ್ಸರ್ ಬಂದ ವ್ಯಕ್ತಿಯ ಜೀವನವೇ ಮುಗಿದು ಹೋಯಿತು ಅನ್ನುವ ಮಾತಿದೆ. ಆ ರೋಗ ಅಷ್ಟೊಂದು ಅಪಾಯಕಾರಿಯೂ ಹೌದು. ಕ್ಯಾನ್ಸರ್‌ಗೆ ಕಿಮೋಥೆರಪಿಯಷ್ಟೇ ತಾತ್ಕಾಲಿಕ ರಿಲೀಫ್‌. ಆದರೆ ಚಿಕಿತ್ಸೆ ನೀಡಿದ ನಂತರವೂ ವ್ಯಕ್ತಿ ಬದುಕುತ್ತಾನೆ ಅನ್ನುವ ಗ್ಯಾರಂಟಿ ಇಲ್ಲ. ಹಾಗಾದರೆ ಆರಂಭದಲ್ಲಿಯೇ ಕ್ಯಾನ್ಸರ್ ಮಾರಿಯನ್ನು ಕಂಡು ಹಿಡಿಯುವುದು ಹೇಗೆ? ಕ್ಯಾನ್ಸರ್ ರೋಗವನ್ನು ಗುಣಪಡಿಸುವುದು ಹೇಗೆ? ಅನ್ನುವುದರ ಬಗೆಗಿನ ರಿಪೋರ್ಟ್ ಇಲ್ಲಿದೆ.

ಕ್ಯಾನ್ಸರ್‌ ರೋಗದ ಲಕ್ಷಣಗಳು:

ಕ್ಯಾನ್ಸರ್ ಪೀಡಿತ ವ್ಯಕ್ತಿಯ ದೇಹದಲ್ಲಿ ನಿರಂತರ ಆಯಾಸ ಕಂಡುಬರುತ್ತದೆ. ಅದರಲ್ಲೂ ಲುಕೇಮಿಯಾ, ಕರುಳು ಅಥವಾ ಹೊಟ್ಟೆಯ ಕ್ಯಾನ್ಸರ್ ಗೀಡಾದವರಿಗೆ ಹೆಚ್ಚಿನ ಆಯಾಸವಿರುತ್ತದೆ. ಇದು ಸಾಮಾನ್ಯ ಆಯಾಸಕ್ಕಿಂತಲೂ ಭಿನ್ನವಾಗಿರುತ್ತದೆ. ಸರಿಯಾಗಿ ನಿದ್ದೆ ಮಾಡಿದ್ದರೂ ಈ ಆಯಾಸ ಕಾಣಿಸಿಕೊಳ್ಳುತ್ತದೆ.

ಕ್ಯಾನ್ಸರ್ ಇರುವವರು ಸಾಮಾನ್ಯವಾಗಿ ತೆಳ್ಳಗೆ ಇರುತ್ತಾರೆ. ಕ್ಯಾನ್ಸರ್ ಇರುವವರ ದೇಹದ ತೂಕವು ಗಣನೀಯವಾಗಿ ಇಳಿಯಲಾರಂಭಿಸುತ್ತದೆ. ಒಂದು ವೇಳೆ ನೀವು ವ್ಯಾಯಾಮ, ಡಯಟ್ ಮಾಡದೇ ತೂಕ ಕಳೆದುಕೊಳ್ಳುತ್ತಿದ್ದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಒಂದೇ ಬಾರಿ 10 ಪೌಂಡ್‌ಗಿಂತಲೂ ಹೆಚ್ಚು ತೂಕ ಕಳೆದುಕೊಂಡರೆ ವೈದ್ಯರನ್ನು ಸಂಪರ್ಕಕ್ಕೆ ಹೋಗಬೇಕು.

ನಮ್ಮ ದೇಹದಲ್ಲಿ ಆಗುವ ಬದಲಾವಣೆಯನ್ನು ಗಮನಿಸಬೇಕು. ಚರ್ಮ ಗಟ್ಟಿಯಾಗುವುದು ಅಥವಾ ಗಂಟುಗಳಾಗುವುದು ಕ್ಯಾನ್ಸರ್‌ನ ಲಕ್ಷಣವಾಗಿದೆ. ಗಂಟುಗಳು ಕಂಡು ಬಂದರೆ ಅವುಗಳ ಆಕಾರ ಬದಲಾಗುತ್ತಿದೆಯೇ ಎಂಬುವುದನ್ನು ಸೂಕ್ಷ್ಮವಾಗಿ ಗಮನಿಸಿ. ಯಾವುದೇ ಬದಲಾವಣೆಗಳು ಕಂಡು ಬಂದಲ್ಲಿ ತಡಮಾಡದೇ ವೈದ್ಯರ ಬಳಿ ತಪಾಸಣೆ ಮಾಡಿಕೊಳ್ಳಿ.

ಸಾಮಾನ್ಯವಾಗಿ ನೋವು ಎಲ್ಲಾ ರೀತಿಯ ಕಾಯಿಲೆಗಳಲ್ಲೂ ಕಾಣಿಸಿಕೊಳ್ಳುತ್ತದೆ. ಇದು ಕ್ಯಾನ್ಸರ್ ಕಾಯಿಲೆಗೀಡಾದವರಲ್ಲೂ ಕಂಡು ಬರುತ್ತದೆ. ಒಂದು ವೇಳೆ ನೋವು ಸಹಿಸಲು ಅಸಾಧ್ಯವಾದರೆ, ಕಡಿಮೆಯಾಗದಿದ್ದಲ್ಲ ಅಥವಾ ಚಿಕಿತ್ಸೆ ಪಡೆದರೂ ಕಡಿಮೆಯಾಗದಿದ್ದಲ್ಲ ಎಚ್ಚರಿಕೆ ಎಂಬುವುದನ್ನು ಮರೆಯದಿರಿ. ದೇಹದ ಒಂದು ಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡರೆ ಕ್ಯಾನ್ಸರ್ ಲಕ್ಷಣ ಎನ್ನಬಹುದು.

ಕ್ಯಾನ್ಸರ್ ನಿಂದ ಬಳಲುವ ಬಹುತೇಕ ಎಲ್ಲರಲ್ಲೂ ಪದೇ ಪದೇ ಜ್ವರ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ನಿಮ್ಮ ರೋಗ ನಿರೋಧಕ ಕಣಗಳಿಗೆ ಕ್ಯಾನ್ಸರ್ ಬಾಧಿಸಿದರೆ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಅಡ್ವಾನ್ಸ್ ಡ್ ಸ್ಟೇಜ್ ಕ್ಯಾನ್ಸರ್ ನಲ್ಲಿ ಜ್ವರ ಸಾಮಾನ್ಯವಾಗಿದ್ದರೂ, ರಕ್ತದ ಕ್ಯಾನ್ಸರ್‌ನ ಪ್ರಾಥಮಿಕ ಹಂತದಲ್ಲೂ ಜ್ವರ ಕಾಣಿಸಿಕೊಳ್ಳುತ್ತದೆ ಎಂಬುವುದು ಗಮನಾರ್ಹ. ಯಾವುದೇ ಸಂದರ್ಭದಲ್ಲೂ ಜ್ವರ ನಿಮ್ಮನ್ನು ಬಾಧಿಸುತ್ತಿದ್ದರೆ ಇದಕ್ಕೆ ಕಾರಣವೇನು ಎಂದು ತಿಳಿಯುತ್ತಿಲ್ಲವೆಂದಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಚರ್ಮದಲ್ಲಿ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚುವುದು ಒಂದು ರೀತಿಯಲ್ಲಿ ಕಷ್ಟ. ಒಂದು ವೇಳೆ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆ, ಕಲೆ ಅಥವಾ ಮಚ್ಚೆಯ ಬಣ್ಣ, ಆಕಾರ ಬದಲಾದರೆ ಚರ್ಮದ ಕ್ಯಾನ್ಸರ್ ಲಕ್ಷಣವೆನ್ನಬಹುದು. ಚರ್ಮದಲ್ಲಾಗುವ ಬದಲಾವಣೆ ಇತರ ಕ್ಯಾನ್ಸರ್ ಲಕ್ಷಣಗಳೂ ಆಗಿರುತ್ತವೆ. ಹೀಗಾಗಿ ಚರ್ಮದಲ್ಲಾಗುವ ಬದಲಾವಣೆಯ ಮೇಲೆ ವಿಶೇಷ ಗಮನ ಹರಿಸಬೇಕು.

ಮಲ ,ಮೂತ್ರ ವಿಸರ್ಜನೆಯನ್ನು ದಿನನಿತ್ಯ ಮಾಡುವುದರಿಂದ ದೇಹವು ಆರೋಗ್ಯವಾಗಿರುತ್ತದೆ. ಮಲ, ಮೂತ್ರ ವಿಸರ್ಜನೆಗೆ ಕಷ್ಟವಾಗುತ್ತಿದೆ, ನೋವು ಅಥವಾ ಉರಿ ಕಾಣಿಸಿಕೊಂಡರೆ, ಅಜೀರ್ಣ ಇವೆಲ್ಲವೂ ಕ್ಯಾನ್ಸರ್ ಲಕ್ಷಣಗಳು ಎಂಬುವುದು ಮರೆಯದಿರಿ.

ವಿರಳವಾಗಿ ಕಾಣಿಸಿಕೊಳ್ಳುವ ಕೆಮ್ಮು ಕಫ ಸಾಮಾನ್ಯ. ಆದರೆ ಪದೇ ಪದೇ ಈ ಸಮಸ್ಯೆ ಬಾಧಿಸುವುದು ಬಹಳ ಡೇಂಜರ್. ಎಲ್ಲವೂ ಕ್ಯಾನ್ಸರ್ ಲಕ್ಷಣ ಎನ್ನಲು ಸಾಧ್ಯವಿಲ್ಲ. ಆದರೆ ವೈದ್ಯರಲ್ಲಿ ತೋರಿಸುವುದು ಸೂಕ್ತ.

ಅಸಹಜ ರಕ್ತಸ್ರಾವ ಅತ್ಯಂತ ಮಾರಕ. ಕೆಮ್ಮುವಾಗ ರಕ್ತ, ಮೂತ್ರ ವಿಸರ್ಜನೆ ವೇಳೆ ರಕ್ತ ಸ್ರಾವ ನಿರ್ಲಕ್ಷಿಸುವುದು ಅಪಾಯಕಾರಿ. ಅಸಹಜ ಮುಟ್ಟು ಕೂಡಾ ಡೇಂಜರಸ್.

ಸೇವಿಸಿದ ಅಹಾರ ದೇಹಕ್ಕೆ ಸೇರುವುದಿಲ್ಲ , ಜೀರ್ಣವಾಗುವುದಿಲ್ಲ ,ನಿರಂತರವಾಗಿ ಅಜೀರ್ಣತೆ ಬಾಧಿಸುತ್ತಿದ್ದರೆ ಎಚ್ಚರ ವಹಿಸುವುದು ಉತ್ತಮ. ಸಾಮಾನ್ಯವಾಗಿ ಅಜೀರ್ಣತೆ ಕಾಡುತ್ತದೆ. ಆದರೆ ಇದನ್ನು ತಳ್ಳಿಹಾಕಬೇಡಿ. ವೈದ್ಯರನ್ನು ಬೇಟಿ ನೀಡಿ ಪರಿಶೀಲನೆ ನಡೆಸಬೇಕು.

ಕಾಲಿನ ಊತ ಕ್ಯಾನ್ಸರ್ ಚಿಕಿತ್ಸೆ ವೇಳೆ ಕಂಡು ಬರುತ್ತದೆ. ಆದರೆ ಯಾವುದೇ ಚಿಕಿತ್ಸೆ ಪಡೆಯದಿದ್ದಾಗಲೂ ಕಾಲಿನಲ್ಲಿ ಊತ ಕಾಣಿಸಿಕೊಂಡರೆ ವೈದ್ಯರ ಬಳಿ ತೋರಿಸಿಕೊಳ್ಳುವುದು ಉತ್ತಮ.

Related posts

ಸುಳ್ಯ: 52 ನೇ ವರ್ಷದ ‘ಶ್ರೀ ಶಾರದಾಂಬ ಉತ್ಸವ-2023’ ಕ್ಕೆ ಭರ್ಜರಿ ಸಿದ್ಧತೆ,ಶಾಸಕಿ ಕು.ಭಾಗೀರಥಿ ಮುರುಳ್ಯ ರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

ಪೈಚಾರ್: ರಸ್ತೆಯಿಂದ ಚರಂಡಿಗೆ ನುಗ್ಗಿದ ಕಾರು..! ಕ್ರೇನ್ ಮೂಲಕ ಮೇಲೆತ್ತಿ ಕಾರ್ಯಾಚರಣೆ

ಸುಳ್ಯ ಹಬ್ಬ ಸಮಿತಿ ಅಧ್ಯಕ್ಷರಾಗಿ ಪಿ.ಸಿ ಜಯರಾಮ ಪುನರಾಯ್ಕೆ