ಮಹಿಳೆ-ಆರೋಗ್ಯವೈರಲ್ ನ್ಯೂಸ್

ನಿಮಗೊತ್ತೇ ರಾಜ್ಯದಲ್ಲಿ ಹೆಚ್ಚುತ್ತಿದೆ ಪುಟ್ಟ ಮಕ್ಕಳ ಕ್ಯಾನ್ಸರ್ ಪ್ರಕರಣ, 0-14 ವರ್ಷದೊಳಗಿನ ಮಕ್ಕಳಲ್ಲಿ 87,000 ಹೊಸ ಪ್ರಕರಣ ಬೆಳಕಿಗೆ..! ಏನಂತಾರೆ ವೈದ್ಯರು..?

ನ್ಯೂಸ್ ನಾಟೌಟ್: ಕ್ಯಾನ್ಸರ್ ಅನ್ನೋದು ಜಗತ್ತನ್ನೇ ಮಹಾಮಾರಿಯಾಗಿ ಕಾಡುತ್ತಿದೆ. ಇದು ಒಮ್ಮೆ ಬಂದರೆ ಜೀವನವೇ ಮುಗಿದು ಹೋಯಿತು ಅನ್ನುವಷ್ಟರ ಮಟ್ಟಿಗಿನ ಫೀಲ್ ಕೊಡುತ್ತದೆ.

ಹಿಂದೆಲ್ಲ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕ್ಯಾನ್ಸರ್ ಈಗೀಗ ಪುಟ್ಟ ಮಕ್ಕಳಲ್ಲಿಯೂ ಕಂಡು ಬರುತ್ತಿದೆ. ಅನುವಂಶಿಯತೆ, ಕಲುಷಿತ ವಾತಾವರಣ, ವಿಷಕಾರಿ ಆಹಾರಗಳ ಸೇವನೆ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಈ ಕಾರಣಗಳಿಂದ ಮಕ್ಕಳಲ್ಲಿಯೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ.

ಮಕ್ಕಳ ಕಾನ್ಸರ್​​ (ಪೀಡಿಯಾಟ್ರಿಕ್ ಆಂಕೊಲಾಜಿ) ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಕ್ರಮೇಣ ಹೆಚ್ಚಳವಾಗುತ್ತಿದೆ. ಆದರೆ ಆಸ್ಪತ್ರೆಗಳಲ್ಲಿ (Hospital) ಮಕ್ಕಳ ಆಂಕೊಲಾಜಿ ತಜ್ಞರ ಕೊರತೆಯಿದೆ ಎಂಬುವುದು ಖೇದಕರ ಸಂಗತಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹೆಚ್ಚಿನ ಮಕ್ಕಳು ಕಾನ್ಸರ್ (Paediatric Oncology) ರೋಗದಿಂದ ಬಳಲುತ್ತಿದ್ದಾರೆ. 2022-23ರಲ್ಲಿ 87,000 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚಾಗಿ 0-14 ವರ್ಷದೊಳಗಿನ ಮಕ್ಕಳಿಗೆ ಕಾನ್ಸರ್ ಭಾದಿಸುತ್ತಿದೆ.

ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾದ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ (KMIO) ಕ್ಯಾನ್ಸರ್ ಬರ್ಡನ್ ವರದಿ ಪ್ರಕಾರ, ಎಲ್ಲಾ ಕ್ಯಾನ್ಸರ್​​​ ಮಾದರಿಯಲ್ಲಿ ಮಕ್ಕಳು ಕ್ಯಾನ್ಸರ್ 7-9 ಪ್ರತಿಷತದಷ್ಟಿದೆ. ಬೆಂಗಳೂರಿನಲ್ಲಿ, ಶೇಕಡಾ 2 ರಷ್ಟಿದೆ. ಮಕ್ಕಳ ಆಂಕೊಲಾಜಿಸ್ಟ್ ಗಳ ಕೊರತೆಯಿದೆ. ಈ ಹಿಂದೆ ಮಕ್ಕಳ ಆಂಕೊಲಾಜಿ ಪ್ರಕರಣಗಳನ್ನು ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್ ಗಳು ನಿರ್ವಹಿಸುತ್ತಿದ್ದರು.

ಏಕೆಂದರೆ ಈ ನಿರ್ದಿಷ್ಟ ರೋಗಕ್ಕೆ ಸೂಪರ್ ಸ್ಪೆಷಾಲಿಟಿ ಹೊಂದಿರುವ ಹೆಚ್ಚಿನ ತರಬೇತಿ ಪಡೆದ ವೈದ್ಯರು ಇರಲಿಲ್ಲ. ಈಗ, ಮಕ್ಕಳ ಆಂಕೊಲಾಜಿಸ್ಟ್ ಗಳಿಗೆ ತರಬೇತಿನೀಡಲು ಕೆಎಮ್​ಐಒನಲ್ಲಿ ಪ್ರತಿ ವರ್ಷ ಮಕ್ಕಳ ಆಂಕೊಲಾಜಿ ಸೂಪರ್ ಸ್ಪೆಷಾಲಿಸ್ಟ್​ ವೈದ್ಯರನನ್ನು ತಯಾರಾಗುತ್ತಿದ್ದಾರೆ ಎಂದು ಕೆಎಂಐಒ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಎ.ಆರ್ ಹೇಳಿದರು.

ಕೆಎಮ್​ಐಒ ಪೀಡಿಯಾಟ್ರಿಕ್ ವಾರ್ಡ್​​ನಲ್ಲಿ ಪ್ರತಿದಿನ 4-5 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಲ್ಯುಕೇಮಿಯಾ, ಲಿಂಫೋಮಾ, ಬ್ರೈನ್ ಟ್ಯೂಮರ್, ಘನ ಗೆಡ್ಡೆ ಮತ್ತು ಮೂಳೆ ಮೃದು ಅಂಗಾಂಶದ ಕ್ಯಾನ್ಸರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ ಎಂದು ತಿಳಿಸಿದರು.

Related posts

ಹಿಂದೂ ಮಹಿಳೆಗೆ ಮುಸ್ಲಿಂ ವ್ಯಕ್ತಿಯ ರಕ್ತ ನೀಡಲು ನಿರಾಕರಿಸಿದ ವೈದ್ಯ..! ಇಲ್ಲಿದೆ ವಿಡಿಯೋ

ಮಡಿಕೇರಿ: ತಾಯಿಯನ್ನೇ ಕೊಂದ ಪಾಪಿ ಮಗ..! ರಕ್ತಸ್ರಾವ ಆದರೂ ಆಸ್ಪತ್ರೆಗೆ ದಾಖಲಿಸದ್ಯಾಕೆ..? ಕೊಡಗಿನಲ್ಲಿ ನಡೆಯಿತು ಅಮಾನವೀಯ ಕೃತ್ಯ!

6 ಸಾವಿರ ರೂ.ಗೆ ಮಹಿಳೆಯನ್ನು ಕೆಲಸಕ್ಕೆ ನೇಮಿಸಿ ಊರೂರು ಸುತ್ತಿ ಮಜಾ ಮಾಡಿದ ಸರ್ಕಾರಿ ಶಾಲಾ ಶಿಕ್ಷಕ..! ಕೊನೆಗೂ ವಂಚಕ ಶಿಕ್ಷಕ ಸಿಕ್ಕಿಬಿದ್ದದ್ದು ಹೇಗೆ?