ದಕ್ಷಿಣ ಕನ್ನಡರಾಜ್ಯಸುಳ್ಯ

ಮೇ28ಕ್ಕೆ NMC ಟ್ಯಾಲೆಂಟ್ ಹೈರ್ -2k24 ಆಯೋಜನೆ, ಪ್ರತಿಷ್ಠಿತ ಸಂಸ್ಥೆಗಳ ಆಗಮನ, ಉದ್ಯೋಗಾಸಕ್ತ ವಿದ್ಯಾರ್ಥಿಗಳಿಗೆ ಭರ್ಜರಿ ವೇದಿಕೆ

31
Spread the love

ನ್ಯೂಸ್ ನಾಟೌಟ್: ಪ್ರತಿಯೊಬ್ಬ ವಿದ್ಯಾರ್ಥಿಗೂ ಪದವಿ ಶಿಕ್ಷಣ ಮುಗಿದ ನಂತರ ಉದ್ಯೋಗಕ್ಕಾಗಿ ಅಲೆದಾಡಬೇಕಿರುವ ಅನಿವಾರ್ಯತೆ ಇರುತ್ತದೆ. ಮುಂದೇನು..? ಅನ್ನುವ ದೊಡ್ಡ ಪ್ರಶ್ನೆ ಎದುರಾಗುತ್ತದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ದೂರದ ಬೆಂಗಳೂರಿನಂತಹ ಮಾಯಾನಗರಿಗೆ ತೆರಳಿ ಅಲ್ಲಿ ಉದ್ಯೋಗ ಹುಡುಕಬೇಕಾಗುತ್ತದೆ. ಆದರೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು (NMC) ವಿದ್ಯಾರ್ಥಿಗಳ ಸಂಕಷ್ಟವನ್ನು ಅರಿತುಕೊಂಡು ಸ್ಪಂದಿಸಿದೆ. “NMC ಟ್ಯಾಲೆಂಟ್ ಹೈರ್ -2k24” ಆಯೋಜನೆ ಮಾಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬೃಹತ್ ಉದ್ಯೋಗದ ಅವಕಾಶವನ್ನು ತೆರೆದಿಟ್ಟಿದೆ. ಕಲಿಕೆ ಜೊತೆಗೆ ಉದ್ಯೋಗದ ಭರವಸೆಯನ್ನು ವಿದ್ಯಾರ್ಥಿಗಳಿಗೆ ನೀಡಿರುವುದು ವಿಶೇಷ. ಮೇ28 ಮಂಗಳವಾರದಂದು NMC ಪ್ಲೇಸ್ ಮೆಂಟ್ ಡ್ರೈವ್ ಕೆವಿಜಿ ಕ್ಯಾಂಪಸ್ ನಲ್ಲಿ ನಡೆಯಲಿದೆ. ಈ ಉದ್ಯೋಗ ಮೇಳವು ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಕ್ಯಾಂಪಸ್ ನೇಮಕಾತಿ ಬೆಳಗ್ಗೆ ಸರಿಯಾಗಿ 9ಕ್ಕೆ ಪ್ರಾರಂಭಗೊಳ್ಳಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಪಾಲ್ಗೊಳ್ಳಲಿರುವ ಕಂಪನಿಗಳ ಪಟ್ಟಿ ಈ ಕೆಳಗಿನಂತಿದೆ. 1.Winman Software 2.Invenger 3.Cogent e Services 4.ABF Group of companies. 5.Mangalore Shipping Company 6.Diya Systems 7.HR Solutions Mangalore. 8.Master Planners Puttur. 9.Axis Bank 10.ICICI Bank 11.Mandovi Motors 12.Kanchama Automotive 13.Apolo Mangalore. 14.ABF group of company. 15.Durga Motors.

See also  ಸುಳ್ಯ: ಪಾದಾಚಾರಿಗೆ ಬೈಕ್ ನಲ್ಲಿ ಗುದ್ದಿದ ಬೈಕ್ ಸವಾರ ಸುಳ್ಳು ಹೇಳಿ ಗ್ರೇಟ್ ಎಸ್ಕೇಪ್..! ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಿಂದಿನಿಂದಲೇ ಬರ್ತೆನೆ ಎಂದವನು ಅನ್ಯಗ್ರಹ ಸೇರಿದನೇ..?
  Ad Widget   Ad Widget   Ad Widget