ಕ್ರೈಂದೇಶ-ವಿದೇಶಬೆಂಗಳೂರುವೈರಲ್ ನ್ಯೂಸ್

ಕೇಕ್ ತಿಂದು 5 ವರ್ಷದ ಮಗು ಸಾವು..! ತಂದೆ-ತಾಯಿಯ ಸ್ಥಿತಿಯೂ ಗಂಭೀರ..! ಆರ್ಡರ್ ಕ್ಯಾನ್ಸಲ್ ಆದದ್ದೇ ಡೆಲಿವರಿ ಬಾಯ್ ಗೆ ಮುಳುವಾಯ್ತಾ..?

ನ್ಯೂಸ್ ನಾಟೌಟ್: ಕೇಕ್ ತಿಂದ ಬಳಿಕ ಫುಡ್​ ಪಾಯ್ಸನ್‌ ನಿಂದ 5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಪಿ.ಅಗ್ರಹಾರದ ಭುವನೇಶ್ವರಿನಗರದಲ್ಲಿ ನಡೆದಿದೆ.

ಧೀರಜ್ ಸಾವನ್ನಪ್ಪಿದ ಮಗು ಎಂದು ಗುರುತಿಸಲಾಗಿದೆ. ಆತನ ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ.

ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಾಲರಾಜ್ ​ಗೆ ಭಾನುವಾರ(ಅ.6) ಸಂಜೆ ಕೇಕ್​ ಆರ್ಡರ್ ಬಂದಿತ್ತು. ಬೇಕರಿಯಿಂದ ಕೇಕ್ ತೆಗೆದುಕೊಂಡು ಹೋಗುವಷ್ಟರಲ್ಲಿ ಆರ್ಡರ್ ಕ್ಯಾನ್ಸಲ್ ಆಗಿದೆ. ಈ ಹಿನ್ನಲೆ ಬಾಲರಾಜ್​ ತಮ್ಮ ಮನೆಗೆ ಆ ಕೇಕ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಬಳಿಕ ಇಡೀ ಕುಟುಂಬ ಆ ಕೇಕ್‌ ಅನ್ನು ಸೇವಿಸಿದ್ದರಂತೆ. ಕೇಕ್ ತಿಂದ ಬಳಿಕ ಮಗು, ಪೋಷಕರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಘಟನೆ ಬಗ್ಗೆ ವಿವರ ನೀಡಬೇಕಾದ ತಂದೆ-ತಾಯಿ ಸಹ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪೊಲೀಸರಿಗೆ ದೂರು ಕೊಡಲು ಅಥವಾ ಘಟನೆ ಹೇಗೆ ನಡೆದಿದೆ ಅನ್ನೋದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಇಬ್ಬರಿಗೂ ಪ್ರಜ್ಞೆ ಬಂದ ಬಳಿಕ ಘಟನೆ ಬೆಳಕಿಗೆ ಬರುವ ಸಾಧ್ಯತೆಯಿದೆ.
ಈ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಕಿಮ್ಸ್​ ಆಸ್ಪತ್ರೆಯ ನಿರ್ದೇಶಕ ಡಾ.ಆಂಜಿನಪ್ಪ, ‘ಇದು ಫುಡ್​ ಪಾಯ್ಸನ್​ನಿಂದ ಆಗಿದ್ದು, ಆಸ್ಪತ್ರೆಗೆ ಬರುವ ಮೊದಲೇ 5 ವರ್ಷದ ಮಗು ಮೃತಪಟ್ಟಿದೆ ಎಂದಿದ್ದಾರೆ.

Click

https://newsnotout.com/2024/10/baby-and-perents-pilgrims-kannada-news-12-years-matter-ka/
https://newsnotout.com/2024/10/political-kannada-news-viral-news-vinesh-pogat-kannada-news-hariyan/
https://newsnotout.com/2024/10/theef-kannada-news-different-way-of-approch-viral-bengaluru/

Related posts

ರಾತ್ರಿ ಕರಾವಳಿಗೆ ಅಪ್ಪಳಿಸಿದ ‘ರೆಮಲ್’ ಚಂಡಮಾರುತ..! 1 ಲಕ್ಷ ಮಂದಿಯ ಸ್ಥಳಾಂತರ

ದಿನಕ್ಕೆ 14 ಗಂಟೆ ಕೆಲಸ ನೀತಿ ವಿರೋಧಿಸಿ ತಡರಾತ್ರಿ ಪ್ರತಿಭಟನೆ..! ಸರ್ಕಾರದ ಮೇಲೆ ಉದ್ಯಮಿಗಳ ಒತ್ತಡ..?

ಬೈಕ್ ​ಗೆ KSRTC ಬಸ್ ಡಿಕ್ಕಿ..! 3 ಮಕ್ಕಳು ಸೇರಿ 5 ಮಂದಿ ಸಾವು..!