Latest

ಇನ್ಮುಂದೆ ಜಾನುವಾರುಗಳಿಗಾಗಿ ಹೊಸ ಯೋಜನೆ!! ಜನೌಷಧಿ ಮಾದರಿಯಲ್ಲೇ ಜಾನುವಾರುಗಳಿಗೂ ‘ಪಶು ಔಷಧಿ’;ಕೇಂದ್ರ ಸಂಪುಟ ಅನುಮೋದನೆ

231
Spread the love

ನ್ಯೂಸ್‌ ನಾಟೌಟ್:ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಔಷಧಿ ಸಿಗಬೇಕೆಂಬ ಉದ್ದೇಶದಿಂದ ‘ಜನೌಷಧಿ’ ನೀಡಲಾಗುತ್ತಿದೆ. ಇದೀಗ ಅದೇ ಮಾದರಿಯಲ್ಲೇ ಜಾನುವಾರುಗಳಿಗೂ ಔ‍ಷಧಿ ದೊರೆಯಬೇಕು ಎಂಬ ಉದ್ದೇಶದಿಂದ ‘ಪಶು ಔಷಧಿ’ ಹೆಸರಿನಲ್ಲಿ ಜೆನೆರಿಕ್‌ ಔಷಧಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಈ ಯೋಜನೆಗಾಗಿ 2026ರ ಮಾರ್ಚ್‌ 31ರ ಹೊತ್ತಿಗೆ 75 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಪಶು ಆರೋಗ್ಯ ಮತ್ತು ರೋಗ ನಿಯಂತ್ರಣದ ಕಾರ್ಯಕ್ರಮ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಜಾನುವಾರುಗಳನ್ನು ಸಾಕೋದಕ್ಕೆ ರೈತರು ಇದರಿಂದ ಕೊಂಚ ನಿರಾಳರಾಗಬಹುದು. ಕಳೆದ ಜನಗಣತಿಯ ಪ್ರಕಾರ 19.25 ಕೋಟಿ ಜಾನುವಾರುಗಳ ಸಂಖ್ಯೆ ಇದೆ. ಪಶುವೈದ್ಯಕೀಯ ಔಷಧಿಗಳು ಮತ್ತು ಮೇವು ಪೂರಕಕ್ಕೆ ಸುಮಾರು 6,000 ಕೋಟಿಗಳಷ್ಟು ಬಳಕೆ ಮಾಡಲಾಗುತ್ತಿದೆ. ಆದರೆ, ಪ್ರಸ್ತಾಪಿತ ನಿಧಿಯ ಹಂಚಿಕೆಯು ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.೨019 ರ 20 ನೇ ಜಾನುವಾರು ಜನಗಣತಿಯ ಪ್ರಕಾರ, ಭಾರತವು ದನ, ಎಮ್ಮೆ, ಮಿಥುನ್ ಮತ್ತು ಯಾಕ್ ಸೇರಿದಂತೆ ಸುಮಾರು 30.38 ಕೋಟಿ ಗೋವುಗಳಿಗೆ ನೆಲೆಯಾಗಿದೆ. ನಂತರ ಜಾನುವಾರು ಜನಗಣತಿಯನ್ನು 2024ರ ಅಕ್ಟೋಬರ್ ಮತ್ತು 2025 ರ ಫೆಬ್ರವರಿ ನಡುವೆ ನಡೆಸಲಾಯಿತು. ಅದರ ಡೇಟಾವನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಸಂಪುಟ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಜಾನುವಾರುಗಳ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರವನ್ನು ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ. (LHDCP) ಯೋಜನೆಯ ‘ಪಶು ಔಷಧಿ’ ಘಟಕದ ಅಡಿಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

 

View this post on Instagram

 

A post shared by News not out (@newsnotout)

See also  ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎನ್ ಎಂಸಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ, ಸುಳ್ಯ ತಾಲ್ಲೂಕಿನ ಸ್ಥಳನಾಮೆಗಳ ಅಧ್ಯಯನ ಮತ್ತು ಮಾಹಿತಿ ಸಂಗ್ರಹ" ಕಾರ್ಯಗಾರ
  Ad Widget   Ad Widget   Ad Widget   Ad Widget