ಬೆಂಗಳೂರುರಾಜಕೀಯವೈರಲ್ ನ್ಯೂಸ್

ಉಪ ಚುನಾವಣೆಗೆ ಬಿಗ್ ಬಾಸ್ ಸ್ಪರ್ಧಿ ಲಾಯರ್‌ ಜಗದೀಶ್ ಸ್ಪರ್ಧೆ..? ಕಾಂಗ್ರೆಸ್‌ ಟಿಕೆಟ್‌ ಕೊಟ್ಟರೆ ಬೊಮ್ಮಾಯಿ ಪುತ್ರನ ವಿರುದ್ಧ ನಿಲ್ಲುತ್ತೇನೆಂದ ಲಾಯರ್..!

ನ್ಯೂಸ್ ನಾಟೌಟ್: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈ ಪೈಕಿ ಸಂಡೂರು & ಶಿಗ್ಗಾವಿ ಕ್ಷೇತ್ರಗಳಿಗೆ ಬಿಜೆಪಿ ಅಭ್ಯೃರ್ಥಿಗಳನ್ನು ಘೋಷಿಸಿದೆ. ಇದರ ಬೆನ್ನಲ್ಲೇ ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ನಿಂದ ಹೊರಬಿದ್ದ ಲಾಯರ್‌ ಕೆ.ಎನ್‌.ಜಗದೀಶ್‌ ಕಾಂಗ್ರೆಸ್‌ ನಿಂದ ಕಣಕ್ಕಿಳಿಯುವ ಆಸೆ ವ್ಯಕ್ತಪಡಿಸಿದ್ದಾರೆ.

ಉಪಚುನಾವಣೆ ಹಿನ್ನೆಲೆ ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಶಿಗ್ಗಾವಿಯಿಂದ ಭರತ್ ಬೊಮ್ಮಾಯಿ ಹಾಗೂ ಬಂಗಾರು ಹನುಮಂತುಗೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಆದರೆ, ಚನ್ನಪಟ್ಟಣಕ್ಕೆ ಅಭ್ಯರ್ಥಿ ಹೆಸರನ್ನು ಇನ್ನೂ ಘೋಷಣೆ ಆಗಿಲ್ಲ. ಇನ್ನು ರಾಜ್ಯದ ಈ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ 13ರಂದು ಉಪ ಚುನಾವಣೆ ನಡೆಯಲಿದೆ. ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಬಸವರಾಜ ಬೊಮ್ಮಾಯಿ ಮಗ ಭರತ್‌ ಬೊಮ್ಮಾಯಿ ಮಗ ಸ್ಪರ್ಧಿಸಿರುವ ಶಿಗ್ಗಾಂವ್‌ನಿಂದ ಕಾಂಗ್ರೆಸ್‌ ಟಿಕೆಟ್‌ಗಾಗಿ ಲಾಯರ್‌ ಜಗದೀಶ್‌ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅವಾಚ್ಯ ಪದಗಳನ್ನು ಬಳಸಿದ ಹಿನ್ನೆಲೆ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಹೊರ ಹಾಕಲಾಗಿದೆ. ಇನ್ನು ನಾನು ಕೂಡ ಸಿಎಂ ಆಗುತ್ತೇನೆ ಎಂಬ ಹೇಳಿಕೆ ನೀಡಿದ್ದ ಅವರು ಇದೀಗ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟರೆ, ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ .

Click

https://newsnotout.com/2024/10/baby-attacked-by-cheethah-kannada-news/
https://newsnotout.com/2024/10/kannada-news-girl-frined-nomore-misbehaviour-k/
https://newsnotout.com/2024/10/couple-mother-poisoned-child-kananda-news-s/
https://newsnotout.com/2024/10/govt-bus-collision-to-pedestrain-kannada-news-h/
https://newsnotout.com/2024/10/bengaluru-cold-drinks-kannada-news-10-crore-leater/

Related posts

ಮಂಗಳೂರಿನ ಇತಿಹಾಸದಲ್ಲೇ ಅತಿದೊಡ್ಡ ಡ್ರಗ್ ಕೇಸ್ ಪತ್ತೆ..! 6 ಕೋಟಿ ರೂಪಾಯಿಯ ಡ್ರಗ್ಸ್ ವಶಕ್ಕೆ, ನೈಜಿರಿಯಾ ಪ್ರಜೆ ಬಂಧನ..!

ಗನ್ ತೋರಿಸಿ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರ..! ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನನ್ನು ಬಂಧಿಸಿದ ಪೊಲೀಸರು..!

ರಕ್ತದಿಂದ ಮೋದಿ ಭಾವಚಿತ್ರ ಬಿಡಿಸಿದ ಅಭಿಮಾನಿ, ಇಂದು(ಎ.29) ಮೋದಿಗೆ ಉಡುಗೊರೆ ನೀಡಲಿರುವ ಕಲಾವಿದ