ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವ್ಯಕ್ತಿಗಳೂ ಕೂಡ ಬ್ಯಾಂಕಿನಲ್ಲಿ ಖಾತೆ ಹೊಂದಿರುತ್ತಾರೆ. ಆದರೆ ಇದೀಗ ಹೊಸತೊಂದು ನಿಯಮ ಬಂದಿದ್ದು, ಒಂದೇ ಹೆಸರಿನಲ್ಲಿ ಎರಡು ಅಥವಾ ಹೆಚ್ಚಿನ ಖಾತೆಗಳಿದ್ದರೆ ಈಗ ದಂಡ ವಿಧಿಸುವ ಸಾಧ್ಯತೆ ಬಗ್ಗೆ ಸುದ್ದಿಯೊಂದು ಹರಿದಾಡಿದೆ. ಹಾಗಾದರೆ ಅಷ್ಟಕ್ಕೂ ಏನಿದು ಹೊಸ ರೂಲ್ಸ್? ಬನ್ನಿ ಇಲ್ಲಿ ತಿಳ್ಕೊಳ್ಳೋಣ..
ಹೌದು, RBI ಈ ನಿಯಮ ತಂದಿದೆ ಎನ್ನಲಾಗಿದ್ದು, ಜನ ಸಾಮಾನ್ಯರು ಈ ಬಗ್ಗೆ ತಿಳಿದು ಕೊಳ್ಳಲೇ ಬೇಕಾದ ವಿಚಾರವಿದು. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಬಹು ಖಾತೆಗಳಿದ್ದರೆ ಸಮಸ್ಯೆ ಉಂಟಾಗಬಹುದು ಎಂದು RBI ಹೇಳುತ್ತದೆ. ಏನಿದ್ದರೂ ಈ ಬಗೆಗಿನ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ.ಬಹು ಬ್ಯಾಂಕ್ ಖಾತೆಗಳಿದ್ದರೆ ₹10,000 ದಂಡ ಕಟ್ಟಬೇಕು ಎಂದು RBI ಈ ಕಠಿಣ ನಿಯಮ ಜಾರಿಗೊಳಿಸಿದೆ. ಹಣ ಕಟ್ಟದಿದ್ದರೆ ಬ್ಯಾಂಕ್ ಕಾನೂನು ಕ್ರಮ ಜರುಗಿಸಬಹುದು ಎಂದು ಹೇಳಿದೆ.
RBI ಬಿಡುಗಡೆ ಮಾಡಿರುವ ಪ್ರಮುಖ ಮಾಹಿತಿಯ ಪ್ರಕಾರ, ಖಾತೆಯಲ್ಲಿ ನಕಲಿ ವಹಿವಾಟುಗಳು ಕಂಡುಬಂದರೆ ದಂಡ ವಿಧಿಸಲಾಗುತ್ತದೆ.ಅದರಲ್ಲೂ ಸಂಶಯಾಸ್ಪದ ವಹಿವಾಟುಗಳಿದ್ದರೆ ದಂಡ ವಿಧಿಸಲಾಗುತ್ತದೆ.ನಕಲಿ ವಹಿವಾಟುಗಳಿದ್ದರೆ ದಂಡ ವಿಧಿಸಲಾಗುವುದರಿಂದ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಲು ಸಾಧ್ಯವಿಲ್ಲ. ಆದ್ದರಿಂದ, ಗ್ರಾಹಕರು ಎಚ್ಚರಿಕೆಯಿಂದಿರುವುದು ಒಳಿತು.