ನ್ಯೂಸ್ ನಾಟೌಟ್: ಪಾಕಿಸ್ತಾನದಿಂದ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಸಚಿನ್ ಎಂಬಾತನನ್ನು ಮದುವೆಯಾಗಿದ್ದ ಸೀಮಾ ಹೈದರ್ (Seema Haider) ಈಗ ಯೂಟ್ಯೂಬ್ ಸೆಲೆಬ್ರಿಟಿಯಾಗಿದ್ದಾರೆ.ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬರ್ತಿದ್ದಂತೆ ಚರ್ಚೆಯಲ್ಲಿದ್ದರು. ತಿಂಗಳವರೆಗೆ ಸೀಮಾ ಹಾಗೂ ಸಚಿನ್ ವಿಷ್ಯ ಎಲ್ಲ ಕಡೆ ಚರ್ಚೆಯಾಯ್ತು. ಇದನ್ನೇ ಸೀಮಾ ಬಂಡವಾಳ ಮಾಡಿಕೊಂಡ್ರು. ನಿಧಾನವಾಗಿ ಯೂಟ್ಯೂಬ್ ನಲ್ಲಿ ತಮ್ಮ ಸ್ಥಾನ ಗಿಟ್ಟಿಸಿಕೊಂಡು ಸೀಮಾ ಹೈದರ್ ಈಗ ಅದ್ರಲ್ಲಿಯೇ ಉತ್ತಮ ಹಣ ಸಂಪಾದನೆ ಮಾಡ್ತಿದ್ದಾರೆ.
ವಿಶೇಷವೆಂದರೆ ಸೀಮಾ ಆದಾಯ ಸಂಪೂರ್ಣವಾಗಿ ಯುಟ್ಯೂಬ್ ಮೇಲೆ ನಿಂತಿದೆ. ಆರಂಭದಲ್ಲಿ ಸೀಮಾ 45 ಸಾವಿರ ರೂಪಾಯಿಯನ್ನು ಯೂಟ್ಯೂಬ್ ನಿಂದ ಗಳಿಸಿದ್ದರು. ಈಗ ಅದು 80 ಸಾವಿರದಿಂದ 1 ಲಕ್ಷಕ್ಕೆ ತಲುಪಿದೆ. ಒಂದಲ್ಲ ಎರಡಲ್ಲ ಆರು ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ ಸೀಮಾ ಹೈದರ್..!
ಕೆಲ ದಿನಗಳ ಹಿಂದಷ್ಟೆ ಸೀಮಾ ಹೈದರ್ ಐದನೇ ಬಾರಿ ಹೆಣ್ಣು ಮಗುವಿಗೆ ಅಮ್ಮನಾಗಿದ್ದಾರೆ. ಈ ವಿಷ್ಯವನ್ನೂ ಬಳಕೆದಾರರಿಗೂ ತಿಳಿಸಿದ್ದರು. ಈಗ ತಮ್ಮ ಗಳಿಕೆ ಬಗ್ಗೆ ಸೀಮಾ ಮಾತನಾಡಿದ್ದಾರೆ. ಸೀಮಾ ಹೈದರ್ ಆರು ಯೂಟ್ಯೂಬ್ ನಲ್ಲಿ ಕೆಲ ಯೂಟ್ಯೂಬ್ ಮಾನಿಟೈಸ್ ಆಗಿದೆ. ಸೀಮಾ, ತಮ್ಮ ಮನೆ, ದಿನಚರಿ, ತಮ್ಮ ಕೆಲಸದ ಬಗ್ಗೆ ವ್ಲಾಗ್ ತಯಾರಿಸಿ ಪೋಸ್ಟ್ ಮಾಡ್ತಾರೆ. ಬರೀ ವಿಡಿಯೋ ವೀವ್ಸ್ ನಿಂದ ಮಾತ್ರ ಸೀಮಾ ಗಳಿಕೆ ಆಗ್ತಿಲ್ಲ, ಅವರು ಲೈವ್ ಸ್ಟ್ರೀಮ್ ದೇಣಿಗೆ, ಪ್ರಾಯೋಜಿತ ವಿಷಯಗಳು ಮತ್ತು ಬ್ರ್ಯಾಂಡ್ ಪ್ರಚಾರಗಳ ಮೂಲಕವೂ ಹಣ ಗಳಿಸುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಸೀಮಾ, ನನ್ನ ಗಳಿಕೆಯನ್ನು ಈಗ ಸಂಪೂರ್ಣವಾಗಿ ಯೂಟ್ಯೂಬ್ ಮೇಲೆ ಕೇಂದ್ರೀಕರಿಸಿದ್ದೇನೆ ಎಂದಿದ್ದಾರೆ. ಕಂಟೆಂಟ್ ಕ್ರಿಯೇಟರ್ ಸಚಿನ್ ಗೆ ಕೆಲಸದ ಜೊತೆ ಈ ಕೆಲಸ ಕೂಡ ಹೊಣೆಯಾಗುತ್ತೆ. ಹಾಗಾಗಿ ಸಚಿನ್ ಗೆ ಕೆಲಸ ಬಿಟ್ಟು ಯೂಟ್ಯೂಬ್ ಚಾನೆಲ್ ಮೇಲೆ ಗಮನ ಹರಿಸುವಂತೆ ಸೀಮಾ ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ. ಹೀಗೆ ಮಾಡಿದ್ರೆ ಕುಟುಂಬದ ಜೊತೆ ಸಚಿನ್ ಹೆಚ್ಚು ಸಮಯ ಕಳೆಯಬಹುದು ಎಂಬ ನಿರೀಕ್ಷೆ ಸೀಮಾರದ್ದು.