ಕ್ರೈಂವೈರಲ್ ನ್ಯೂಸ್

ಬಸ್‌ ಸೀಟ್ ವಿಚಾರಕ್ಕೆ ವೃದ್ಧನಿಗೆ ಹೊಡೆದ ಮಹಿಳೆಯರು..! ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದ ಪೊಲೀಸರು ಮಾಡಿದ್ದೇನು?

116

ನ್ಯೂಸ್ ನಾಟೌಟ್: ಶಕ್ತಿಯೋಜನೆ ಜಾರಿಯಾದ ಬಳಿಕ ಹಲವು ಅವಾಂತರಗಳು ರಾಜ್ಯದ ಅಲ್ಲಲ್ಲಿ ಸೃಷ್ಟಿಯಾಗಿವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ (Shakti Seheme) ಜಾರಿಗೆ ತಂದಿದೆ.

ಯಾದಗಿರಿ (Yadagiri)ಯಲ್ಲಿ ಬಸ್‌ ನಲ್ಲಿ ಸೀಟ್‌ಗಾಗಿ ವಯೋವೃದ್ಧನ ಮೇಲೆ ನಾಲ್ವರು ಮಹಿಳೆಯರು ಮನಸೋ ಇಚ್ಛೆ ಥಳಿಸಿರುವ ಆರೋಪ ಕೇಳಿ ಬಂದಿದೆ. ಯಾದಗಿರಿಯಿಂದ ಸೇಡಂಗೆ ಹೊರಟ್ಟಿದ್ದ ಬಸ್‌ನಲ್ಲಿ ಘಟನೆ ನಡೆದಿದೆ.ಬಸ್‌ನಲ್ಲಿ ಕುಳಿತಿದ್ದ ವೃದ್ಧನಿಗೆ ಬಸ್ ಏರಿದ ನಾಲ್ವರು ಮಹಿಳೆಯರು ಸೀಟ್ ಬಿಡುವಂತೆ ಕೇಳಿದ್ದಾರೆ.

ಆಗ ಮುಂದಿನ ಸೀಟ್‌ಗಳು ಖಾಲಿ ಇವೆ, ಅಲ್ಲಿ ಕುಳಿತುಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೆ ನಾಲ್ವರು ಮಹಿಳೆಯರು ವಯೋವೃದ್ಧನ ಮೇಲೆ ಮುಗಿಬಿದ್ದು, ಮನಬಂದಂತೆ ಹ* ಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆ ಬಗ್ಗೆ ಇತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು, ವೃದ್ಧನ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ನಾಲ್ವರು ಮಹಿಳೆಯರನ್ನು ವಿಚಾರಣೆಗೆಂದು ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿ ತಿಳಿಸಿದೆ.

https://www.youtube.com/watch?v=fId9Dakdix0
See also  ಏಳನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ..! ಕಾರಣ ಏನು ಗೊತ್ತಾ?
  Ad Widget   Ad Widget   Ad Widget   Ad Widget   Ad Widget   Ad Widget