ಕ್ರೈಂಸುಳ್ಯ

ಅರಂತೋಡು: ಸ್ಕೂಲ್ ಬಸ್ ಅಡಿಗೆ ಬಿದ್ದು ಆರು ವರ್ಷದ ಬಾಲಕಿ ಮೃತ್ಯು ಪ್ರಕರಣ! ಶಿಕ್ಷೆ ಪ್ರಕಟಿಸಿದ ಕೋರ್ಟ್!

411

ನ್ಯೂಸ್ ನಾಟೌಟ್ : ಕೆವಿಜಿಯ ಐಪಿಎಸ್ ಶಾಲೆಯ ಒಂದನೆಯ ತರಗತಿ ವಿದ್ಯಾರ್ಥಿನಿ ಆಗ್ನೇಯ ಬಾಲು ಬಸ್ಸಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಳು. 2018 ಫೆಬ್ರವರಿ 12ರಂದು ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿ ಈ ಘಟನೆಗೆ ನಡೆದಿತ್ತು. ಈ ಸಂಬಂಧ ಶಾಲಾ ಬಸ್ಸು ಚಾಲಕ ಧನಂಜಯ ಎಂಬುವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಮಾರ್ಚ್ 23ರಂದು ತೀರ್ಪು ನೀಡಿದೆ.

ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ತನಿಖಾಧಿಕಾರಿ ಸರ್ಕಲ್ ಇನ್ ಸ್ಪೆಕ್ಟರ್ ಸತೀಶ್ ಕುಮಾರ್ ಆರ್ ಪ್ರಕರಣ ದಾಖಲಿಸಿಕೊಂಡು ಬಸ್ಸು ಚಾಲಕ ಧನಂಜಯರ ಮೇಲೆ ಕಲಂ 279, 304(ಎ ) ಮತ್ತು ಬಸ್ ನ ಉಸ್ತುವಾರಿ ದಿನೇಶ್ ದೋಷರೋಪಣ ಪತ್ರವನ್ನು ಕೋರ್ಟಿಗೆ ಸಲ್ಲಿಸಿದ್ದರು.

ತೀರ್ಪು ನೀಡಿರುವ ನ್ಯಾಯಾಲಯ ಮಾರ್ಚ್ 23 ರಂದು ತೀರ್ಪು ನೀಡಿದ್ದು, ಒಂದನೇ ಆರೋಪಿ ಬಸ್ಸು ಚಾಲಕ ಧನಂಜಯರಿಗೆ ಒಂದು ವರ್ಷ ಜೈಲು ಶಿಕ್ಷೆ 5,000 ರೂ ದಂಡ, ದಂಡ ಕಟ್ಟಲು ತಪ್ಪಿದರೆ ಒಂದು ತಿಂಗಳು ಹೆಚ್ಚುವರಿ ಸಜೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿ ದಿನೇಶ್ ರನ್ನು ದೋಷಮುಕ್ತ ಎಂದು ಆದೇಶ ನೀಡಿದೆ.

See also  ಕೆ.ವಿ.ಜಿ.ಪಾಲಿಟೆಕ್ನಿಕ್ ನ ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದಿಂದ ಪ್ರತಿಭಾ ಶೋಧ ಮತ್ತು ರಸಪ್ರಶ್ನೆ ಕಾರ್ಯಕ್ರಮ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget