ಕ್ರೈಂ

ಅರಂತೋಡು: ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ, ಹೆದರಿ ಬಸ್‌ನಿಂದ ಕೆಳಕ್ಕಿಳಿದ ಪ್ರಯಾಣಿಕರು..!

ಸುಳ್ಯ: ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಪ್ರಯಾಣಿಕರು ಆತಂಕಗೊಂಡ ಘಟನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಬೆಳಗ್ಗೆ ಕೊಯನಾಡಿನಿಂದ ಹೊರಟ ಸುಳ್ಯ -ಕೊಯನಾಡು ಸರಕಾರಿ ಸೆಟ್ಲ್ ಬಸ್ ಅರಂತೋಡು ಸಮೀಪಿಸುತ್ತಿದ್ದಂತೆ ಬೆಂಕಿ ಉಗುಳಲು ಆರಂಭಿಸಿತು. ತಕ್ಷಣ ಚಾಲಕ ಬಸ್ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕೆಲವು ಮಹಿಳೆಯರು ಹೆದರಿ ಬಸ್ ನಿಂದ ಕೆಳಕ್ಕೆ ಇಳಿದಿದ್ದಾರೆ. ಏನು ಆಗುವುದಿಲ್ಲ ಸಣ್ಣ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ, ಸುಳ್ಯದ ತನಕ ಹೋಗಬಹುದು ಎಂದು ಚಾಲಕ ಧೈರ್ಯ ಹೇಳಿದ ನಂತರ ಅದೇ ಬಸ್ ನಲ್ಲಿ ಎಲ್ಲರು ಸುಳ್ಯಕ್ಕೆ ತೆರಳಿದರು ಎಂದು ತಿಳಿದು ಬಂದಿದೆ.

Related posts

ಮದುವೆಗೆ ಬಂದ ವೀಡಿಯೊಗ್ರಾಫರ್ ವರನ ತಂಗಿ ಜೊತೆ ಪರಾರಿ..! ಇಲ್ಲಿದೆ ವಿಚಿತ್ರ ಪೇಮ ಕಹಾನಿ

ಬಿಗ್ ಬಾಸ್‌ ಮಾಜಿ ಸ್ಪರ್ಧಿ,ಲಾಯರ್​ ಜಗದೀಶ್​ರನ್ನು ಬಂಧಿಸಿದ ಪೊಲೀಸರು!

ಸಂಪಾಜೆ ಕೃಷಿ ಪತ್ತಿನ ಮಾಜಿ ನಿರ್ದೇಶಕ ಇನ್ನಿಲ್ಲ, ನಾಳೆ ಪಾರ್ಥೀವ ಶರೀರ ಹುಟ್ಟೂರಿಗೆ