Latestಕ್ರೈಂಜೀವನ ಶೈಲಿ/ಆರೋಗ್ಯವಿಡಿಯೋವೈರಲ್ ನ್ಯೂಸ್

ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತ..! ಪ್ರಯಾಣಿಕರನ್ನು ಉಳಿಸಿದ ನಿರ್ವಾಹಕನ ಸಾಹಸಕ್ಕೆ ಮೆಚ್ಚುಗೆ, ವಿಡಿಯೋ ವೈರಲ್

1.1k

ನ್ಯೂಸ್ ನಾಟೌಟ್: ಬಸ್ ಚಾಲನೆ ಮಾಡುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು ಚಾಲಕನೋರ್ವ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಶುಕ್ರವಾರ(ಮೇ.23) ನಡೆದಿದ್ದು ವಿಡಿಯೋ ತಡವಾಗಿ ವೈರಲ್ ಆಗುತ್ತಿದೆ.
ಮೃತಪಟ್ಟ ಬಸ್ ಚಾಲಕನನ್ನು ಪ್ರಭು ಎಂದು ಗುರುತಿಸಲಾಗಿದೆ.

ಘಟನೆಯ ದೃಶ್ಯ ಬಸ್ ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಪ್ಪತ್ತಕ್ಕೂ ಅಧಿಕ ಮಂದಿ ಪ್ರಯಾಣಿಕರನ್ನು ಹೊತ್ತ ಖಾಸಗಿ ಬಸ್ ಪಳನಿ ಬಸ್ ನಿಲ್ದಾಣದಿಂದ ಪುದುಕೊಟ್ಟೈ ಕಡೆಗೆ ಚಲಿಸುತ್ತಿತ್ತು ಈ ವೇಳೆ ಬಸ್ ಕನಕಂಪಟ್ಟಿ ದಾಟುತ್ತಿದ್ದಂತೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಬಸ್ ಚಾಲನೆಯಲ್ಲಿ ಇರುವ ವೇಳೆಯೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಬಸ್ ಕಂಡಕ್ಟರ್ ಓಡಿ ಬಂದು ಕೈಯಿಂದ ಬ್ರೇಕ್ ಒತ್ತಿ ಬಸ್ಸನ್ನು ನಿಲ್ಲಿಸಿದ್ದಾರೆ.

ಬಳಿಕ ಬಸ್ ನಲ್ಲಿದ್ದವರು ಚಾಲಕನ ಸಹಾಯಕ್ಕೆ ಧಾವಿಸಿದ್ದಾರೆ, ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಕಾಣುವಂತೆ ಮೂರ್ಛೆ ಹೋದ ಚಾಲಕನಿಗೆ ಪಿಟ್ಸ್ ಬಂದಿರಬೇಕು ಎಂದು ನಿರ್ವಾಹಕ ಚಾಲಕನ ಕೈಗೆ ಕಬ್ಬಿಣ ನೀಡಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ, ಬಳಿಕ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ಚಾಲಕ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಸ್ ನ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ ಅಲ್ಲದೆ ನಿರ್ವಾಹಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ರಾಹುಲ್‌ ಗಾಂಧಿ ವಿರುದ್ಧ ಜಾಮೀನು ರಹಿತ ವಾರಂಟ್‌..! ಅಮಿತ್‌ ಶಾ ವಿರುದ್ಧ ಅವಹೇಳನ ಮಾಡಿದ್ದ ರಾಹುಲ್ ಗೆ ಬಂಧನ ಭೀತಿ..!

ಕೇರಳ : ಹಡಗಿನಲ್ಲಿ ತರುತ್ತಿದ್ದ 10 ತೈಲ ಕಂಟೇನರ್‌ ಗಳು ಸಮುದ್ರಪಾಲು..! ಕಂಟೇನರ್‌ ಗಳು ದಡಕ್ಕೆ ಬಂದರೆ ಅವುಗಳ ಬಳಿ ತೆರಳದಂತೆ ಆದೇಶ..!

ತುಂಡುಡುಗೆ ತೊಟ್ಟು ತೃತೀಯ ಲಿಂಗಿ ಮಹಿಳೆಯಂತೆ ಅಶ್ಲೀಲ ವಿಡಿಯೋ ಮಾಡ್ತಾನೆ ಎಂದು ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ..! ಸರ್ಕಾರಿ ವೈದ್ಯನ ವಿರುದ್ಧ ಎಫ್.ಐ.ಆರ್..!

See also  ಮನೆ ಮುಂದೆ ಆಡುತ್ತಿದ್ದ 2 ವರ್ಷದ ಮಗು ಮೇಲೆ ಕಾರು ಹರಿಸಿದ 15ರ ಬಾಲಕ..! ಇಲ್ಲಿದೆ ಮನಕಲಕುವ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget