ಕ್ರೈಂ

ಪ್ಯಾಂಟ್ ಜಿಪ್ ಜಾರಿಸಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸುತ್ತಿದ್ದ ಬಸ್ ಕಂಡೆಕ್ಟರ್ ಗೆ ಬಿತ್ತು ಗೂಸಾ..!

845

ಉಡುಪಿ: ನರ್ಸಿಂಗ್‌ ಕಾಲೇಜು ವಿದ್ಯಾರ್ಥಿನಿಯರಿಗೆ ದಿನಿನಿತ್ಯ ಪ್ಯಾಂಟ್ ಜಿಪ್ ಜಾರಿಸಿ ಗುಪ್ತಾಂಗ ತೋರಿಸುತ್ತಿದ್ದ ಬಸ್‌ ನಿರ್ವಾಹಕನನ್ನು ಅಟ್ಟಾಡಿಸಿಕೊಂಡು ವಿದ್ಯಾರ್ಥಿನಿಯರೇ ಹೊಡೆದ ಘಟನೆ ಸಂತೆಕಟ್ಟೆಯ ಬಳಿ ನಡೆದಿದೆ. ಬಿಸಿ ಬಿಸಿಯಾದ ಕಜ್ಜಾಯ ತಿಂದ ಕಂಡಕ್ಟರ್ ಈಗ ಪೊಲೀಸರ ಬಳಿಯೂ ಬೇಕಾದಷ್ಟು ಒದೆ ತಿಂದು ಇಂಗು ತಿಂದ ಮಂಗನಂತಾಗಿದ್ದಾನೆ.

ಏನಿದು ಘಟನೆ?

ಹೆಬ್ರಿಯ ಹೆಸರಾಂತ ಖಾಸಗಿ ಬಸ್ ನ ಕಂಡಕ್ಟರ್ ಉಪೇಂದ್ರ ಎನ್ನುವಾತ ಸಂತೆಕಟ್ಟೆಯ ನರ್ಸಿಂಗ್ ಕಾಲೇಜ್ ಬಳಿ ತನ್ನ ಸ್ಕೂಟಿಯಲ್ಲಿ ಬಂದು ಅಲ್ಲಿನ ವಿದ್ಯಾರ್ಥಿನಿಯರಿಗೆ ಪ್ಯಾಂಟ್ ಜಿಪ್ ಜಾರಿಸಿ ಕಳೆದ ಕೆಲವು ದಿನಗಳಿಂದ ಗುಪ್ತಾಂಗ ತೋರಿಸುತ್ತಿದ್ದ. ಮಾತ್ರವಲ್ಲದೆ ಕೈಸನ್ನೆ, ಕಣ್ಣ್ ಸನ್ನೆ ಮಾಡುತ್ತ ಯುವತಿಯರ ಜೊತೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂದು ದೂರಲಾಗಿತ್ತು. ನಿನ್ನೆ ಸಂಜೆ ಡ್ಯೂಟಿ ಮುಗಿಸಿ ಮನೆಗೆ ತೆರಳುವಾಗ ಆತನ ಗ್ರಹಚಾರ ಕೆಟ್ಟಿತ್ತೋ ಏನೋ ಕಾಲೇಜ್ ನ ಮುಖ್ಯಸ್ಥರು, ವಿದ್ಯಾರ್ಥಿನಿಯರು ಇರುವಾಗಲೇ ತನ್ನ ನೀಚ ವರ್ತನೆ ತೋರಿದ್ದು, ಕಾಲೇಜ್ ನ ಸಿಬ್ಬಂದಿ, ವಿದ್ಯಾರ್ಥಿನಿಯರು ಬಸ್ ಕಂಡಕ್ಟರ್ ನ ಅಟ್ಟಾಡಿಸಿದ್ದಾರೆ.

ಅಲ್ಲಿಂದ ಎದ್ನೋ ಬಿದ್ನೋ ಎಂದು ಓಡಿದ ಉಪೇಂದ್ರನ ಗ್ರಹಚರ ಅಲ್ಲೂ ಕೆಟ್ಟಿತ್ತು. ಕಾಲೇಜ್ ನಿಂದ ತೆಂಕನಿಡಿಯೂರ್ ಕಡೆ ಓಡುತ್ತಿದ್ದ ಈತ ಸ್ಥಳೀಯ ದಸಂಸ ಮುಖಂಡರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಲ್ಲಿ ಆತನನ್ನು ಹಿಡಿದು ಬಾಯಿ ಬಿಡಿಸಿದಾಗ ಘಟನೆ ವಿವರಿಸುತ್ತಿದ್ದಂತೆ ನೇರ ಕಾಲೇಜ್ ಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯರ ಕೈಗೆ ಕಂಡಕ್ಟರ್ ನನ್ನು ನೀಡಿದ್ದಾರೆ. ದಿನ ನಿತ್ಯ ಕಿರುಕುಳ ನೀಡುತ್ತಿದ್ದವನು ಈತನೇ ಎಂದು ತಿಳಿದು ಮತ್ತೆ ಉಪೇಂದ್ರನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ ನರ್ಸಿಂಗ್ ವಿದ್ಯಾರ್ಥಿನಿಯರು. ಬಳಿಕ ಉಡುಪಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಕಾಮುಕ ಬಸ್ ಕಂಡಕ್ಟರ್ ಪೊಲೀಸರ ಅತಿಥಿಯಾಗಿದ್ದಾನೆ.

See also  ಬಾಂಗ್ಲಾದೇಶದಲ್ಲಿ ಜೈಲಲ್ಲಿದ್ದ ಭಯೋತ್ಪಾದಕರು ಈಗ ಬಿಡುಗಡೆಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ತ್ರಿಪುರಾ ಸಿಎಂ..! ಬಾಂಗ್ಲಾ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯಕ್ಕೆ ಆತಂಕ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget