ವೈರಲ್ ನ್ಯೂಸ್

ಸರ್ಕಾರಿ ಬಸ್ ನಲ್ಲೂ ಬಂತು ಕ್ಯೂಆರ್ ಸ್ಕ್ಯಾನರ್..! ಇನ್ನೂ ಸರ್ಕಾರಿ ಬಸ್ ಗಳಲ್ಲಿ ಕ್ಯಾಶ್ ಇಲ್ಲದೆಯೂ ಪ್ರಯಾಣಿಸ್ಬಹುದಾ..?

222
Pc cr: News 18 kannada

ನ್ಯೂಸ್ ನಾಟೌಟ್ : ಚಿಲ್ಲರೆ ಸಮಸ್ಯೆ ಹಿನ್ನೆಲೆ NWKRTC ಫೋನ್ ಪೇ ಮೊರೆ ಮೂಲಕ ಟಿಕೆಟ್ ದರ ಪಡೆಯುವ ವಿನೂತನ ಪ್ರಯೋಗ ಆರಂಭಿಸಿದೆ.

ಬಸ್ ಗಳಲ್ಲಿ ಸ್ಕ್ಯಾನರ್ ವ್ಯವಸ್ಥೆ ಮೆಚ್ಚುಗೆ ಪಡೆಯುತ್ತಿದ್ದು, ಕಂಡಕ್ಟರ್ ಕೊರಳಿಗೆ ಸ್ಕ್ಯಾನರ್ ಹಾಕಿರುವ ಫೋಟೋಗಳು ವೈರಲ್ ಆಗುತ್ತಿವೆ. ಪ್ರಯಾಣಿಕರಲ್ಲಿ ಚಿಲ್ಲರೆ ಹಣದ ಸಮಸ್ಯೆ ಹಿನ್ನೆಲೆ ಕ್ಯಾಶ್ ಲೆಸ್ ವ್ಯವಹಾರಕ್ಕೆ NWKRTC ಮುಂದಾಗಿದೆ.

ಹುಬ್ಬಳ್ಳಿ ಡಿಪೋ ವತಿಯಿಂದ ಕಂಡೆಕ್ಟರ್ ಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಕ್ಯಾನರ್ ನೀಡಿದ್ದಾರೆ. ಹುಬ್ಬಳ್ಳಿಯಿಂದ ಬೀಳಗಿ ಮಾರ್ಗವಾಗಿ ವಿಜಯಪುರಕ್ಕೆ ಹೊರಟಿದ್ದ ಬಸ್​​ನಲ್ಲಿ ಸ್ಕ್ಯಾನರ್ ಕಂಡು ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಪ್ರಯಾಣಿಕರು ಸಂತೋಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಟಿಕೆಟ್ ಖರೀದಿಸುವಾಗ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಎದುರಾಗುತ್ತಿದ್ದು, ಹಾರ್ಡ್ ಕ್ಯಾಶ್ ಇಲ್ಲದವರಿಗೂ ಟಿಕೇಟ್ ಖರೀದಿಸಲು ಸಮಸ್ಯೆಯಾಗದಂತೆ ವ್ಯವಸ್ಥೆ ಜಾರಿಗೆ ತರಲಾಗಿದೆ.

See also  ಮಂಗಳೂರು: ಕನ್ನಡ ಕಲಿಯುವಂತೆ ರೈಲ್ವೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದ ಕೇಂದ್ರ ಸಚಿವ..! ನಾನು ಚಿಕ್ಕವನಿದ್ದಾಗ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಪಾಲಾಗಿದ್ದೆ ಎಂದ ವಿ.ಸೋಮಣ್ಣ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget