ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್

ಊರಿಗೆ ಹೋಗಲು ಬಸ್ ಸಿಗದಿದ್ದಕ್ಕೆ ವಾಹನಗಳ ಮೇಲೆ ಕಲ್ಲು ತೂರಾಟ..! ಮೂರು ಸಾರಿಗೆ ಬಸ್, ಕಾರು ಮತ್ತು ಲಾರಿಗಳ ಗಾಜು ಪುಡಿ-ಪುಡಿ..!

ನ್ಯೂಸ್‌ ನಾಟೌಟ್: ಊರಿಗೆ ಹೋಗಲು ಬಸ್ ಸಿಗಲಿಲ್ಲ ಎಂದು ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಲಿಂಗಸುಗೂರಿನ ಗೋಲಪಲ್ಲಿಯ ತಿಮ್ಮಣ್ಣ ಎಂದು ಗುರುತಿಸಲಾಗಿದೆ. ಗ್ರಾಮದ ಬಳಿ ನ.19ರಂದು ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ. ಕಲ್ಲು ತೂರಾಟದಲ್ಲಿ ಮೂರು ಸಾರಿಗೆ ಬಸ್, ಕಾರು ಹಾಗೂ ಲಾರಿಗಳ ಗಾಜುಗಳು ಒಡೆದು ಹೋಗಿದ್ದವು. ಅಲ್ಲದೇ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಈ ಘಟನೆ ಪೊಲೀಸರಿಗೆ ತಲೆನೋವಾಗಿತ್ತು. ಕಳ್ಳತನ ಮಾಡಲು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು. ಆರೋಪಿಗಳು ಕುಡಿದ ಮತ್ತಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಬಂಧಿತ ಆರೋಪಿ ತನ್ನ ಅಕ್ಕ, ಬಾವನನ್ನ ಬೆಂಗಳೂರಿಗೆ ಕಳುಹಿಸಲು ಬಸ್ ಸಿಗದೆ ಬೇಸರಗೊಂಡಿದ್ದ. ಬಳಿಕ ತನ್ನ ಮೂರು ಜನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಬೆಳಗಿನ ಜಾವ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದರು ಎನ್ನಲಾಗಿದೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ.

Click

https://newsnotout.com/2024/11/kasaragodu-family-issue-women-police-nomore-by-husband-kannada-news-fn/
https://newsnotout.com/2024/11/darshan-thugudeepa-kannada-news-highcourt-lawyer-kannada-news-d/

Related posts

ಮಂಗಳೂರು: ಶಾಲೆಯ ಕಾಂಪೌಂಡ್ ಕುಸಿದು 7 ವರ್ಷದ ವಿದ್ಯಾರ್ಥಿನಿ ಮೃತ್ಯು..! ಇಲ್ಲಿದೆ ಸಂಪೂರ್ಣ ಮಾಹಿತಿ

ಭಕ್ತರ ವೇಷದಲ್ಲಿ ಮಠಕ್ಕೆ ಬಂದು ಚಿನ್ನ, ಹಣ ದೋಚಿದ ಕಳ್ಳರು..! ಪಿಸ್ತೂಲ್‌ ಹಿಡಿದು ಬೆದರಿಕೆ ಹಾಕಿದ್ದಾರೆ ಎಂದ ಸ್ವಾಮೀಜಿ..!

ಸಿಎಂ ಬಡವರ ಖಾತೆಗೆ 5 ಸಾವಿರ ರೂ. ಹಾಕುತ್ತಾರೆ ಎಂದು ವಾಟ್ಸಪ್‌ ನಲ್ಲಿ ಸಂದೇಶ ಹರಿಬಿಟ್ಟ ಕಿಡಿಗೇಡಿಗಳು..! ವದಂತಿ ನಂಬಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ನೂರಾರು ಜನ..!