ಕ್ರೈಂ

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬದುಕಿದ ಬೈಕ್ ಸವಾರ

ನ್ಯೂಸ್ ನಾಟೌಟ್: ಬಸ್ ಚಾಲಕರೊಬ್ಬರು ಸಮಯ ಪ್ರಜ್ಞೆ ಮೆರೆದುದರಿಂದ ಸಂಭವನೀಯ ಭಾರಿ ದುರಂತವೊಂದು ತಪ್ಪಿರುವ ಘಟನೆ ಕನಕಮಜಲು ಸಮೀಪದ ಆನೆಗುಂಡಿ ಎಂಬಲ್ಲಿ ನಡೆದಿದೆ. ಸರಕಾರಿ ಗೂಡ್ಸ್ ಬಸ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾದ ಘಟನೆ ಮೇ.26ರಂದು ಮಧ್ಯಾಹ್ನ ಸಂಭವಿಸಿದೆ.

ಮಡಿಕೇರಿ ಡಿಪೋಗೆ ಸೇರಿದ ಕೆ.ಎಸ್ ಆರ್.ಟಿ.ಸಿ. ಗೂಡ್ಸ್ ಬಸ್ ಪುತ್ತೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಪಂಜದ ಯುವಕನೋರ್ವ ಚಲಾಯಿಸುತ್ತಿದ್ದ ಬೈಕ್ ಆನೆಗುಂಡಿ ತಿರುವಿನಲ್ಲಿ ಬಸ್ ನ ಮುಂಭಾಗಕ್ಕೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಈ ವೇಳೆ ಬಸ್ ಚಾಲಕ ಬಸ್ಸನ್ನು ಸಂಪೂರ್ಣ ಎಡಭಾಗಕ್ಕೆ ಎಳೆದುಕೊಂಡದ್ದರಿಂದ ಬೈಕ್ ಸವಾರ ಬಲಬದಿಗೆ ಬಿದ್ದು, ಕೈ, ಹಾಗೂ ಎಡ ಕಾಲಿಗೆ ಗಂಭೀರವಾಗಿ ಗಾಯಗಳಾಗಿದೆ. ಗಾಯಾಳು ಯುವಕನನ್ನು ಸುಳ್ಯದ  ಖಾಸಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

Lok Sabha Result-2024: ಕಾಂಗ್ರೆಸ್ ಅಭ್ಯರ್ಥಿ​ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಜೈಕಾರ..! ಆರೋಪಿಯನ್ನು ಬಂಧಿಸಿದ ಪೊಲೀಸರು

“ಜೈ ಶ್ರೀರಾಮ್”‌ ಹೇಳದಕ್ಕೆ ಹಲ್ಲೆ ನಡೆಸಿದ ಅಪರಿಚಿತರು! ಗಡ್ಡ ಕತ್ತರಿಸಿ ವಿಕೃತಿ ಮೆರೆದ ಪುಂಡರು!

ಚುನಾವಣೆಗೆ ಹಣ, ಅಮಲಿದ್ದೇ ಕಾರ್ ಬಾರು..! ಇಲ್ಲಿವರೆಗೆ ನಗದು, ಮದ್ಯ ಸೇರಿ ಒಟ್ಟು 4,658 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ..!