ಸಂಪಾಜೆ: ಇಲ್ಲಿನ ಕೊಡಗು ಸಂಪಾಜೆಯ ಸಮೀಪ ಸರಕಾರಿ ಬಸ್ ವೊಂದು ಭೀಕರ ಅಪಘಾತಕ್ಕೆ ತುತ್ತಾದ ಘಟನೆ ಇದೀಗ ನಡೆದಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ಸಾಗುತ್ತಿದ್ದ ಕೆಎಸ್ ಆರ್ ಟಿಸಿ (ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ ಸಂಪಾಜೆಯ ಗಡಿಕ್ಕಲು ಸಮೀಪ ಮುಂದಿನ ಟಯರ್ ಸ್ಫೋಟಗೊಂಡಿದ್ದರಿಂದ ಅಪಘಾತಕ್ಕೆ ಈಡಾಗಿದೆ. ಬಸ್ ಪಲ್ಟಿ ಹೊಡೆದು ಹೊಳೆಗೆ ಬಿದ್ದಿದೆ. ಘಟನೆಯಲ್ಲಿ ಹಲವಾರು ಜನರಿಗೆ ಗಾಯವಾಗಿದ್ದು ಒಂದಿಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.