ಕರಾವಳಿಸುಳ್ಯ

ಪ್ರಯಾಣಿಕರಿಗಾಗಿ ಖಾಸಗಿ ಸಂಸ್ಥೆಯೊಂದರಿಂದ ಭರ್ಜರಿ ಆಫರ್..!,ಬಸ್ ಟಿಕೆಟ್‌ ದರ ಕೇವಲ 1 ರೂ. ಮಾತ್ರ..!

179

ನ್ಯೂಸ್ ನಾಟೌಟ್ : ಶಾಲಾ ಮಕ್ಕಳು ಇದೀಗ ದಸರಾ ರಜೆಯ ಗಮ್ಮತ್ತಿನಲ್ಲಿದ್ದಾರೆ.ರಜೆ ಹಿನ್ನೆಲೆ ದೂರದೂರಿಗೆ ಕುಟುಂಬ ಸಮೇತ ಪ್ರವಾಸ ಹೋಗೋದು ಸಾಮಾನ್ಯ.  ಇದೀಗ ಪ್ರಯಾಣಿಕರಿಗಾಗಿಯೇ ಖಾಸಗಿ ಸಂಸ್ಥೆಯೊಂದು ಭರ್ಜರಿ ಆಫರ್​ ನೀಡಿದೆ.

ಹೌದು, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನವರಾತ್ರಿ ಅಥವಾ ದಸರಾ, ದೀಪಾವಳಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಹಬ್ಬಗಳನ್ನು ಆಚರಿಸಲು ಹೆಚ್ಚಿನ ಸಂಖ್ಯೆಯ ಜನರು ತಮ್ಮ ಊರುಗಳಿಗೆ ಹೋಗುತ್ತಾರೆ. ಈ ವೇಳೆ ರೈಲುಗಳ ಟಿಕೆಟ್‌ ರಶ್ ಇರೋದ್ರಿಂದ ರೈಲು ಟಿಕೆಟ್ ಖರೀದಿಸುವುದು ತುಂಬಾ ಕಷ್ಟ. ಹೀಗಾಗಿ ಖಾಸಗಿ ಬಸ್​​ ಸಂಸ್ಥೆಯೊಂದು ಪ್ರಯಾಣಿಕರಿಗೆ ಭರ್ಜರಿ ಆಫರ್​​ ನೀಡಿದೆ. ಗ್ರಾಹಕರು ತಮ್ಮಿಚ್ಛೆಯ ಸ್ಥಳಗಳಿಗೆ ತೆರಳಬಹುದು.

ಖಾಸಗಿ ಸಂಸ್ಥೆಯ Abhi Busನಲ್ಲಿ ಕೇವಲ 1 ರೂ.ಗೆ ಬಸ್​ ಟಿಕೆಟ್​ ಬುಕ್ಕಿಂಗ್​ಗೆ ಅವಕಾಶ ಕಲ್ಪಿಸಲಾಗಿದೆ. ಬಸ್ ಬುಕಿಂಗ್ ಅಪ್ಲಿಕೇಶನ್ AbhiBus ಅಕ್ಟೋಬರ್ 19 ರಿಂದ ಅಕ್ಟೋಬರ್ 25ರ ವರೆಗಿನ ನಡುವಿನ ಪ್ರಯಾಣಕ್ಕೆ ಮಾತ್ರ ಈ ಆಫರ್​ ನೀಡಿದೆ. ಈ ಆಫರ್​ ಪಡೆಯಲು ಪ್ರಯಾಣಿಕರು “LUCKY1” ರಿಯಾಯಿತಿ ಕೋಡ್​ಅನ್ನು ಬಳಸಬೇಕಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಭಿಬಸ್ ಒಂದು ಪ್ರಮುಖ ಆನ್‌ಲೈನ್ ಬಸ್-ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇದು 2,500 ಖಾಸಗಿ ಬಸ್ ನಿರ್ವಾಹಕರು ಮತ್ತು ಎಲ್ಲಾ ಪ್ರಮುಖ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು (“SRTCs”) ಒಟ್ಟುಗೂಡಿಸುತ್ತದೆ. ಇದು ದೇಶಾದ್ಯಂತ 1,00,000 ಕ್ಕೂ ಹೆಚ್ಚು ಮಾರ್ಗಗಳನ್ನು ಒಳಗೊಂಡಿದೆ. ಇ-ಟಿಕೆಟಿಂಗ್ ವೇದಿಕೆಯ ಹೊರತಾಗಿ, ಅಭಿಬಸ್ 350 ಕ್ಕೂ ಹೆಚ್ಚು ಖಾಸಗಿ ಬಸ್ ನಿರ್ವಾಹಕರು ಮತ್ತು ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಸೇರಿದಂತೆ ಭಾರತದಲ್ಲಿನ 5 SRTC ಗಳಿಗೆ ಅತ್ಯಾಧುನಿಕ ಆನ್‌ಲೈನ್ ಪ್ರಯಾಣಿಕ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಒದಗಿಸುತ್ತದೆ.

See also  ದೈವ ನರ್ತಕ ಕಾಂತು ಅಜಿಲ ಕುಟುಂಬಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ 1ಲಕ್ಷ ರೂ. ಪರಿಹಾರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget