Latestಉದ್ಯೋಗ ವಾರ್ತೆದೇಶ-ವಿದೇಶ

ಬುಲೆಟ್ ಟ್ರೈನ್ ಯೋಜನೆಯಡಿ ಹಲವು ಉದ್ಯೋಗಾವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ

635

ನ್ಯೂಸ್ ನಾಟೌಟ್: ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯು ದೇಶದ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 24 ರವರೆಗೆ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (ಸಿವಿಲ್) – 35 ಹುದ್ದೆಗಳು, ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (ಎಲೆಕ್ಟ್ರಿಕಲ್) – 17 ಹುದ್ದೆಗಳು, ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (ಎಸ್ & ಟಿ) – 03 ಹುದ್ದೆಗಳು, ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) – 04 ಹುದ್ದೆಗಳು, ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (ಆರ್ಕಿಟೆಕ್ಚರ್) – 08 ಹುದ್ದೆಗಳು, ಜೂನಿಯರ್ ಟೆಕ್ನಿಕಲ್ ಮ್ಯಾನೇಜರ್ (ಡೇಟಾಬೇಸ್ ಅಡ್ಮಿನ್) – 01 ಹುದ್ದೆ, ಸಹಾಯಕ ವ್ಯವಸ್ಥಾಪಕ (ಸಂಗ್ರಹಣೆ) – 01 ಹುದ್ದೆ, ಸಹಾಯಕ ವ್ಯವಸ್ಥಾಪಕ (ಸಾಮಾನ್ಯ) – 01 ಹುದ್ದೆ ಖಾಲಿ ಇರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಸಂಬಂಧಿತ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಪದವಿ (ಬಿಇ/ಬಿ.ಟೆಕ್) ಹೊಂದಿರಬೇಕು. ಅಲ್ಲದೆ, ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷಗಳಿಗಿಂತ ಹೆಚ್ಚಿರಬಾರದು ಎಂದು ತಿಳಿಸಲಾಗಿದೆ.

ಈ ನೇಮಕಾತಿಯಲ್ಲಿ, ಅಭ್ಯರ್ಥಿಗಳು ಆಯ್ಕೆಗಾಗಿ ಮೂರು ಹಂತಗಳ ಮೂಲಕ ನಡೆಯುತ್ತದೆ. ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಬರೆಯಬೇಕಾಗುತ್ತದೆ, ಇದು ಮೊದಲ ಹಂತದ ಆನ್‌ಲೈನ್ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ನಂತರ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ. nhsrcl.in ನ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು.

ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದ ಮಹಿಳೆಗೆ ಚಿಕನ್ ಬಿರಿಯಾನಿ ನೀಡಿದ್ದಕ್ಕಾಗಿ ರೆಸ್ಟೋರೆಂಟ್ ಮಾಲಕ ಅರೆಸ್ಟ್..! ಮುಂದೇನಾಯ್ತು..?

17 ವರ್ಷದ ಬಾಲಕನ ಜೊತೆ 3 ಮಕ್ಕಳ ತಾಯಿಗೆ ಲವ್..! ಪ್ರೀತಿಗಾಗಿ ಪತಿ ಮತ್ತು ಮೂರು ಮಕ್ಕಳನ್ನು ಬಿಟ್ಟು ಹೋದ ಮಹಿಳೆ..!

See also  ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಹೈಕೋರ್ಟ್ ನಿಂದ ಸ್ವಯಂಪ್ರೇರಿತ ಪಿಐಎಲ್ ದಾಖಲು..! ಇಂದು(ಜೂ.5) ಮದ್ಯಾಹ್ನ 2:30ಕ್ಕೆ ವಿಚಾರಣೆ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget