ನ್ಯೂಸ್ ನಾಟೌಟ್: ದೆಹಲಿಯ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿದ್ದವರು ಎರಡನೇ ಮಹಡಿಯಿಂದ ಕೆಳಗೆ ಹಾರಿರುವ ಘಟನೆ ಇಂದು(ಫೆ.19) ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೆಂಕಿಯು ಇಡೀ ಕಟ್ಟಡವನ್ನು ಆವರಿಸಿತ್ತು, ಒಳಗೆ ಯಾರಿದ್ದಾರೆ ಎನ್ನುವ ಮಾಹಿತಿ ಇರಲಿಲ್ಲ, ಒಳಗೆ ಹೋಗಲು ಸಾಧ್ಯವಾಗದಷ್ಟು ಬೆಂಕಿ ಇತ್ತು. ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿಯದೆ ಬೇರೆ ದಾರಿ ಇರಲಿಲ್ಲ. ಆರು ಮಂದಿಯನ್ನು ಪುಷ್ಪಾಂಜಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿಯ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿದ್ದವರು ಎರಡನೇ ಮಹಡಿಯಿಂದ ಕೆಳಗೆ ಹಾರಿರುವ ಘಟನೆ ಇಂದು(ಫೆ.19) ನಡೆದಿದೆ. https://t.co/mUXlWQa90a
— News Not Out (@News_Not_Out) February 19, 2025
ಇದನ್ನೂ ಓದಿ:ಕೇರಳ: ಫುಟ್ಬಾಲ್ ಮೈದಾನದಲ್ಲಿ ಪಟಾಕಿ ಸಿಡಿದು 30ಕ್ಕೂ ಅಧಿಕ ಮಂದಿಗೆ ಗಾಯ..! ಇಲ್ಲಿದೆ ವಿಡಿಯೋ
ಅವಘಡಕ್ಕೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.