ಕರಾವಳಿಸುಳ್ಯ

ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ತಾ. ಸಮಿತಿ ವತಿಯಿಂದ ಶಿಲ್ಪಾಚಾರಿ ಕಾಂತಮಂಗಲರಿಗೆ ಸನ್ಮಾನ

ನ್ಯೂಸ್ ನಾಟೌಟ್ : ಭಾರತೀಯ ಮಜ್ದೂರ್ ಸಂಘ ದ.ಕ ಇದರ ಮಂಗಳೂರಿನ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ದ.ಕ ಜಿಲ್ಲಾ ನೂತನ ಸಮಿತಿಯ ಸದಸ್ಯರಾಗಿ ಶಿಲ್ಪಾಚಾರಿ ಕಾಂತಮಂಗಲ ಆಯ್ಕೆಯಾದರು. ಈ ವೇಳೆ ಅವರನ್ನು ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ತಾಲೂಕು ಸಮಿತಿಯ ವತಿಯಿಂದ ಸುಳ್ಯ ತಾಲೂಕು ಕಾರ್ಯಾಲಯದಲ್ಲಿ ಇಂದು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ನಾರಾಯಣ ಹಾಗೂ ಉಪಾಧ್ಯಕ್ಷರಾದ ಚಂದ್ರಶೇಖರ ಅರಂತೋಡು, ಪ್ರಧಾನ ಕಾರ್ಯದರ್ಶಿಯಾದ ಮಧುಸೂಧನ, ಜೊತೆ ಕಾರ್ಯದರ್ಶಿಯಾದ ಮನೋಹರ, ಕೋಶಾಧಿಕಾರಿಯಾದ ಮೋನಪ್ಪ ಜಯನಗರ ಹಾಗೂ ಸದಸ್ಯರುಗಳಾದ ಶಿವಾನಂದ ಪಾಟೀಲ್, ಶಿಜು, ಭವಿತ್,ನವೀನ ಹಾಗೂ ಕಾರ್ಯಾಲಯದ ಸಿಬ್ಬಂದಿ ರಶ್ಮಿ ಉಪಸ್ಥಿತರಿದ್ದರು.

Related posts

ಸುರತ್ಕಲ್ : ಹೆದ್ದಾರಿಯಲ್ಲೇ ಸುಟ್ಟು ಕರಕಲಾದ ಕಾರು..! ಉಡುಪಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಿಎಂಡಬ್ಲ್ಯೂ ಕಾರು..!

ಕೆವಿಜಿ ಡೆಂಟಲ್ ಮಹಾ ವಿದ್ಯಾಲಯದಲ್ಲಿ ಪದವಿ ಪ್ರದಾನ ಹಾಗು ವಾರ್ಷಿಕೋತ್ಸವ ಸಮಾರಂಭ

ನನ್ನ ಮದುವೆ ಶೀಘ್ರದಲ್ಲೇ ಇದೆ,ರಶ್ಮಿಕಾ ಜತೆ ಇನ್ನೂ ಸಂಪರ್ಕದಲ್ಲಿದ್ದೇನೆ-ನಟ ರಕ್ಷಿತ್ ಶೆಟ್ಟಿ;ಸಿಂಪಲ್ ಸ್ಟಾರ್ ಮದುವೆಯಾಗುತ್ತಿರೋ ಆ ‘ಲಕ್ಕಿ ಗರ್ಲ್’ ಯಾರು ಗೊತ್ತಾ?