ಕ್ರೈಂದೇಶ-ವಿದೇಶಬೆಂಗಳೂರುರಾಜಕೀಯರಾಜ್ಯವೈರಲ್ ನ್ಯೂಸ್

ಸಿಐಡಿ ಕಚೇರಿಯಲ್ಲಿ ಸತತ 3 ಗಂಟೆಗಳ ಕಾಲ ಬಿಎಸ್‌ವೈ ವಿಚಾರಣೆ..! ಲೈಂಗಿಕ ಆರೋಪದ ಬಗ್ಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು..?

254

ನ್ಯೂಸ್ ನಾಟೌಟ್: ಸಹಾಯ ಕೇಳಿ ಕೊಂಡು ತಾಯಿಯ ಜತೆ ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ(ಜೂ.17) ಸಿಐಡಿಯಿಂದ ಸುದೀರ್ಘ‌ ವಿಚಾರಣೆ ಎದುರಿಸಿದ್ದಾರೆ. ಅರಮನೆ ರಸ್ತೆಯ ಕಾರ್ಲಟನ್‌ ಹೌಸ್‌ ಕಟ್ಟಡದಲ್ಲಿರುವ ಸಿಐಡಿ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಪುನೀತ್‌ ಬಿಎಸ್‌ವೈ ಯನ್ನು ಸುಮಾರು 3.30 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಘಟನೆ ದಿನ ಮನೆಯಲ್ಲಿ ಏನಾಯಿತು, ದೂರುದಾರ ಮಹಿಳೆ, ಸಂತ್ರಸ್ತೆ ತಮಗೆ ಹೇಗೆ ಪರಿಚಯ ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ಉತ್ತರಿಸಿದ ಯಡಿಯೂರಪ್ಪ, ನನಗೂ ದೂರುದಾರ ಮಹಿಳೆ ಹಾಗೂ ಆಕೆಯ ಪುತ್ರಿಗೂ ಪರಿಚಯವಿಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಸಹಾಯ ಕೇಳಿ ನಿತ್ಯ ಹಲವು ಜನರು ಮನೆ ಬಳಿ ಬರುತ್ತಾರೆ.

ಅವರನ್ನು ಮಾತನಾಡಿಸಿ ಕೈಲಾದ ಸಹಾಯ ಮಾಡುತ್ತೇವೆ. ಹಾಗೆಯೇ ಅಂದು ಮಹಿಳೆ ಹಾಗೂ ಆಕೆಯ ಮಗಳು ನಮ್ಮ ಮನೆಗೆ ಬಂದು ಸಹಾಯ ಕೇಳಿದ್ದರು. ಈ ವೇಳೆ ಅವರನ್ನು ಮನೆಯಲ್ಲಿ ಕುಳ್ಳಿರಿಸಿ ಸಮಸ್ಯೆ ಆಲಿಸಿದೆ. ಸೌಜನ್ಯದಿಂದ ಮಾತನಾಡಿ ಕಳುಹಿಸಿ ಕೊಟ್ಟೆ. ಅಪ್ರಾಪ್ತ ವಯಸ್ಕಳ ತಾಯಿ ಹೇಳಿದಂತೆ ಯಾವುದೇ ದೌರ್ಜನ್ಯ ಎಸಗಿಲ್ಲ ಎಂದಿದ್ದಾರೆ ಜೊತೆಗೆ ಈ ಮಹಿಳೆ ಹೀಗೆಯೇ ಹಲವು ರಾಜಕಾರಣಿಗಳು ಮತ್ತು ಹೈ ಪ್ರೊಫೈಲ್ ವ್ಯಕ್ತಿಗಳಿಗೆ ಸುಳ್ಳು ಲೈಂಗಿಕ ಆರೋಪಗಳನ್ನು ಮಾಡುವುದೇ ಚಾಳಿ ಮಾಡಿಕೊಂಡಿದ್ದಳು ಎನ್ನಲಾಗಿದೆ.

Click 👇

https://newsnotout.com/2024/06/darshan-case-shed-issue-owner-reaction
https://newsnotout.com/2024/06/kodagu-well-elephant-issue-forest-department-kannada-news
See also  ಸೇನಾ ಕಾರ್ಯಾಚರಣೆಯ ಲೈವ್ ಕವರೇಜ್ ಮಾಡದಂತೆ ಟಿವಿ ಚಾನೆಲ್ ​ಗಳಿಗೆ ರಕ್ಷಣಾ ಇಲಾಖೆ ಸೂಚನೆ..! ಭಾರತದಿಂದ ದೊಡ್ಡ ದಾಳಿಯ ಮುನ್ಸೂಚನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget