ಕ್ರೈಂಬೆಂಗಳೂರುವೈರಲ್ ನ್ಯೂಸ್

ವಿವಾಹಿತ ಮಹಿಳೆಗಾಗಿ ಸಹೋದರರ ಕಿತ್ತಾಟ..! ಮುಂದೇನಾಯ್ತು..? ಇಲ್ಲಿದೆ ಸಂಪೂರ್ಣ ವಿವರ

ನ್ಯೂಸ್‌ ನಾಟೌಟ್‌: ವಿವಾಹಿತ ಮಹಿಳೆ ಜತೆ ಅಕ್ರಮ ಸಂಬಂಧ ಬೆಳೆಸುವ ವಿಚಾರದಲ್ಲಿ ಸಹೋದರರ ನಡುವೆ ಮನಸ್ತಾಪ ಉಂಟಾಗಿ ಜಗಳ ವಿಕೋಪಕ್ಕೆ ತಿರುಗಿ ಕೊನೆಗೆ ಓರ್ವನ ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ಬೆಂಗಳೂರಿನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮರಳಕುಂಟೆ ಗ್ರಾಮದ ಯುವಕ ನಾಗೇಶ್(25) ಕೊಲೆಯಾಗಿರುವ ದುರ್ದೈವಿ. ಅದೇ ಗ್ರಾಮದ ಯುವಕ ನವೀನ್ (22) ಕೊಲೆ ಮಾಡಿದ ಆರೋಪಿ.

ಮರಳಕುಂಟೆ ಗ್ರಾಮದ ನಾಗೇಶ್ ಹಾಗೂ ನವೀನ್ ದೊಡ್ಡಪ್ಪ- ಚಿಕ್ಕಪ್ಪನ ಮಕ್ಕಳು. ಇಬ್ಬರು ಬೇರೆ ಬೇರೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಲೆಕ್ಯಾತನಹಳ್ಳಿಯ ವಿವಾಹಿತ ಮಹಿಳೆಯೊಂದಿಗೆ ಇವರಿಬ್ಬರಿಗೂ ಪರಿಚಯವಾಗಿದ್ದು, ಆಕೆ ಜೊತೆ ಅಕ್ರಮ ಸಂಬಂಧ ಬೆಳೆಸುವ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಗುರುವಾರ ರಾತ್ರಿ 8 ಗಂಟೆಗೆ ಮನೆಯಲ್ಲಿದ್ದ ನಾಗೇಶನಿಗೆ ಆರೋಪಿ ನವೀನ್ ಪೋನ್ ಮಾಡಿ ಎಲೆಕ್ಯಾತನಹಳ್ಳಿ ಗ್ರಾಮಕ್ಕೆ ಕರೆಸಿದ್ದು ಇಬ್ಬರೂ ಪಾನಮತ್ತರಾಗಿ ಇದೇ ವಿಚಾರವಾಗಿ ತಡರಾತ್ರಿ ಗಲಾಟೆ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿ ಆರೋಪಿ ನವೀನ್ ಮಾರಕಾಸ್ತ್ರದಿಂದ ನಾಗೇಶನ ಎದೆಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಕೊಲೆ ಮಾಡಿದ ಆರೋಪಿ ನವೀನ್ ತನ್ನ ಮೊಬೈಲ್‌ನಿಂದ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಆ್ಯಂಬುಲೆನ್ಸ್ ಬರುವ ವೇಳೆಗೆ ನಾಗೇಶ್ ಮೃತಪಟ್ಟಿದ್ದ. ಪೊಲೀಸರು ಆರೋಪಿ ನವೀನ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Related posts

ಕೊಡಗು: ಉಂಗುರ ನುಂಗಿ ಮಗು ಸಾವು! ಫಲಿಸದ ಪ್ರಯತ್ನ!

ಪೊಲೀಸರಿಗೆ ಬಡಿಸಿದ ಮೊಸರನ್ನದಲ್ಲಿ ಹುಳು ಪತ್ತೆ..! ಕಳೆದ ಬಾರಿ ಇಲಿಯೊಂದು ಪತ್ತೆಯಾಗಿತ್ತು..! ಕೇಟರರ್ಸ್ ವಿರುದ್ಧ ಪ್ರಕರಣ ದಾಖಲು

ಕಳ್ಳ ಸ್ವಾಮಿ ಮಾತು ಕೇಳಬೇಡಿ, ಎಸಿ ರೂಂ ಸ್ವಾಮೀಜಿ ನಮಗೆ ಬೇಕಾಗಿಲ್ಲ ಎಂದ್ದದ್ದೇಕೆ ಯತ್ನಾಳ್‌..? ಯಾರು ಆ ಸ್ವಾಮೀಜಿ..?