ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಸಹೋದರರ ನಡುವೆ ತಂದೆಯ ಅಂತ್ಯಕ್ರಿಯೆಗಾಗಿ ಜಗಳ..! ತಂದೆಯ ಅರ್ಧ ಮೃತದೇಹ ಕೇಳಿದ ಮಗ..!

ನ್ಯೂಸ್ ನಾಟೌಟ್: ಸಹೋದರನೊಂದಿಗೆ ತಂದೆಯ ಅಂತ್ಯಕ್ರಿಯೆ ವಿಚಾರವಾಗಿ ಗಲಾಟೆ ಮಾಡಿಕೊಂಡು ಶವಸಂಸ್ಕಾರಕ್ಕೆ ಅರ್ಧ ಮೃತದೇಹ ಕೊಡುವಂತೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ಮಧ್ಯಪ್ರದೇಶದ ಟಿಕಮ್‌ ಗಢ್ ಜಿಲ್ಲೆಯಲ್ಲಿ ನಡೆದಿದೆ.

ಸಹೋದರರ ಗಲಾಟೆ ತಾರಕಕ್ಕೇರಿದ ಕಾರಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಕಿರಿಯ ಮಗ ದೇಶರಾಜ್‌ ಎನ್ನುವವರೊಂದಿಗೆ ವಾಸಿಸುತ್ತಿದ್ದ ಧ್ಯಾನಿ ಸಿಂಗ್‌ ಗೋಷ್‌ ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ(ಫೆ.2) ಮೃತಪಟ್ಟಿದ್ದರು. ಗ್ರಾಮದ ಹೊರಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಹಿರಿಯ ಮಗ ಕಿಶನ್‌ ಸುದ್ದಿ ತಿಳಿಯುತ್ತಿದ್ದಂತೆ ದೇಶರಾಜ್ ಮನೆಗೆ ಬಂದಿದ್ದರು.

ಈ ವೇಳೆ ಹಿರಿಯ ಮಗ ಕಿಶನ್ ತನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡುವುದಾಗಿ ಹೇಳಿ ಗಲಾಟೆ ಮಾಡಿದ್ದಾನೆ. ಆದರೆ ಕಿರಿಯ ಮಗ ಶವಸಂಸ್ಕಾರವನ್ನು ನಡೆಸುವುದು ಮೃತ ವ್ಯಕ್ತಿಯ ಬಯಕೆ ಎಂದು ಹೇಳಿಕೊಂಡಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಕಿಶನ್, ದೇಹವನ್ನು ಅರ್ಧದಷ್ಟು ಕತ್ತರಿಸಿ ಸಹೋದರರ ನಡುವೆ ಹಂಚಬೇಕೆಂದು ಒತ್ತಾಯಿಸಿದ್ದಾನೆ. ಇದೇ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿ ಕಿಶನ್‌ ನನ್ನು ಮನವೊಲಿಸಿದ್ದು, ಕಿರಿಯ ಮಗ ಶವಸಂಸ್ಕಾರವನ್ನು ನೆರವೇರಿಸಿದರು ಎನ್ನಲಾಗಿದೆ.

Related posts

ಉಡುಪಿಯಲ್ಲಿ ಮತ್ತೆ ಗ್ಯಾಂಗ್ ವಾರ್..! ಬೈಕ್ ಬಿಟ್ಟು ಓಡಿದ ಯುವಕರು..! ಒಂದೇ ತಿಂಗಳಲ್ಲಿ 3 ಬಾರಿ ಪುಂಡರ ಕಾಳಗ..!

ಅವಕಾಶ ಕೊಟ್ಟರೆ ಭಾರತಕ್ಕೆ ಹೋಗಿ ಸೆಟಲ್ ಆಗುತ್ತೇವೆ , ಪಾಕಿಸ್ತಾನದ ಯುವಕರು ಹೀಗೆ ಹೇಳಿದ್ಯಾಕೆ..?

3 ಸಾವಿರ ಅಡಿಕೆ ಮತ್ತು ಬಾಳೆ ಗಿಡಗಳನ್ನು ತೆರವು ಮಾಡಿ 15 ಎಕರೆ ಜಾಗವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ..! ಇಲ್ಲಿದೆ ಸಂಪೂರ್ಣ ಮಾಹಿತಿ