ನ್ಯೂಸ್ ನಾಟೌಟ್ :ಸುಳ್ಯದ ಪ್ರತಿಭೆ ಬ್ರಿಜೇಶ್ ಬೊಳುಗಲ್ಲು ಅವರು 2024 -25 ಶೈಕ್ಷಣಿಕ ಸಾಲಿನಲ್ಲಿ ಇಂಗ್ಲೆಂಡಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ‘University of Greenwich’ 3 Natural Resources Institute 3 Engineering and Science ໖ Applied food Safety and Quality Management ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಜುಲೈ 24ರಂದು ಪಡೆದಿದ್ದಾರೆ.
ಇವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಜೀವವಿಜ್ಞಾನದಲ್ಲಿ ಬಿ.ಎಸ್ಸಿ ಪದವಿ ಶಿಕ್ಷಣವನ್ನು ಪೂರೈಸಿದ್ದು, 2022-23 ಶೈಕ್ಷಣಿಕ ವರ್ಷದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ Food Science and Nutrition ವಿಷಯದಲ್ಲಿ MSc ಪದವಿಯನ್ನು ಪಡೆದಿದ್ದಾರೆ.
ಬ್ರಿಜೇಶ್ ಅವರು ಸುಳ್ಯದ ಮಂಡೆಕೋಲಿನ ಬೊಳುಗಲ್ಲು ನಿವಾಸಿಯಾಗಿರುವ ಶ್ರೀಮತಿ ಜಲಜಾಕ್ಷಿ ಹಾಗೂ ಸೋಮಪ್ಪ ದಂಪತಿಯ ಪುತ್ರ.