ದೇಶ-ವಿದೇಶ

ಭಾರಿ ಮಳೆಗೆ ಸೇತುವೆ ಕುಸಿದು 11 ಮಂದಿ ಸಾವು, ಐದು ವಾಹನಗಳು ನದಿ ಪಾಲು, 30 ಮಂದಿ ನಾಪತ್ತೆ

ನ್ಯೂಸ್‌ ನಾಟೌಟ್‌: ಭಾರಿ ಮಳೆಗೆ ದಿಢೀರ್‌ ಪ್ರವಾಹ ಉಂಟಾಗಿ ಬೃಹತ್‌ ಸೇತುವೆ ಕುಸಿದು 11 ಮಂದಿ ಸಾವನ್ನಪ್ಪಿ , 30 ಜನರು ಗಾಯಗೊಂಡಿರುವ ಘಟನೆ ಚೀನಾದಲ್ಲಿ ಸಂಭವಿಸಿದೆ. ವಾಯುವ್ಯ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಸೇತುವೆಯೊಂದು ಭಾಗಶಃ ಕುಸಿದು ಈ ದುರ್ಘಟನೆ ಸಂಭವಿಸಿದೆ.

ಸೇತುವೆ ಕುಸಿದ ಸಂದರ್ಭ ಇದರ ಮೇಲೆ ಸಂಚರಿಸುತ್ತಿದ್ದ ಹಲವು ವಾಹನಗಳು ನದಿಗೆ ಬಿದ್ದಿವೆ. ಶನಿವಾರದ ಹೊತ್ತಿಗೆ ಐದು ವಾಹನಗಳು ನದಿಗೆ ಬಿದ್ದಿರುವುದು ದೃಢಪಟ್ಟಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಚೀನಾದಲ್ಲಿ ಭಾರಿ ಮಳೆಯಾಗುತ್ತಿದೆ, ಭಾರತದಲ್ಲಿಯೂ ಮುಂಗಾರು ಆರಂಭವಾದಾಗಿನಿಂದ ಹಲವು ಸೇತುವೆಗಳು ಕುಸಿದಿವೆ. ಉತ್ತರಾಖಂಡದ ಋಷಿಕೇಶ-ಬದ್ರಿನಾಥ ಹೆದ್ದಾರಿಯಲ್ಲಿ ರುದ್ರ ಪ್ರಯಾಗದ ಬಳಿ ನಿರ್ಮಾಣ ಹಂತದಲ್ಲಿದ್ದ ಸಿಗ್ನೇಚರ್ ಸೇತುವೆಯ ಒಂದು ಭಾಗವು ಕುಸಿದಿದೆ.

Related posts

5 ತಿಂಗಳ ಕಂದನನ್ನು ಕಚ್ಚಿ ಕೊಂದ ಬೀದಿ ನಾಯಿ..! ಮಗುವನ್ನು ಮಲಗಿಸಿ ಕೆಲಸಕ್ಕೆ ಹೋಗಿದ್ದ ಹೆತ್ತವರು..!

ನೇಪಾಳಿ ವಿದ್ಯಾರ್ಥಿನಿಯನ್ನು ಅಮೆರಿಕಾದಲ್ಲಿ ಗುಂಡಿಕ್ಕಿ ಕೊಂದ ಭಾರತೀಯ ವ್ಯಕ್ತಿ ..! ಅಪಾರ್ಟ್‌ಮೆಂಟ್‌ನೊಳಗೆ ಶವ ಕಂಡು ಪೋನ್ ಮಾಡಿದ ಸ್ಥಳೀಯರು..!

ಪೊಲೀಸ್ ಮಾಹಿತಿದಾರನೆಂದು ನಂಬಿಸಿ ನಕ್ಸಲರಿಂದ ಗ್ರಾಮಸ್ಥನ ಕೊಲೆ..! ಕಳೆದೊಂದು ವರ್ಷದಲ್ಲಿ ನಕ್ಸಲ್ ಹಿಂಸಾಚಾರಕ್ಕೆ ಆ ಪ್ರದೇಶದಲ್ಲಿ 68 ನಾಗರಿಕರು ಬಲಿ..!