ಕರಾವಳಿಕೊಡಗುಪುತ್ತೂರುಬೆಂಗಳೂರುರಾಜಕೀಯಸುಳ್ಯ

ಜೋಶಿ ವಿರುದ್ಧದ ಕುಮಾರಸ್ವಾಮಿ ಟೀಕೆಗೆ ಬ್ರಾಹ್ಮಣ ಮಹಾಸಭಾ ಆಕ್ರೋಶ

441

ನ್ಯೂಸ್‌ನಾಟೌಟ್‌: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ ಟೀಕೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.


ಜೋಶಿ ಅವರು ಉತ್ತರ ಕರ್ನಾಟಕದವರೇ ವಿನಃ ಮಹಾರಾಷ್ಟ್ರ ಮೂಲದವರಲ್ಲ. ಜೋಶಿ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಯಿದೆ ಎಂದು ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳು ಹೇಳಿದ್ದಾರೆ.

ಗಾಂಧೀಜಿಯನ್ನು ಕೊಂದ ನಾಥುರಾಂ ಗೋಡ್ಸೆ ಕೆಟ್ಟವನೆಂಬ ಕಾರಣಕ್ಕೆ ಚಿತ್ಪಾವನ ಬ್ರಾಹ್ಮಣ ಸಮುದಾಯವನ್ನು ನಿಂದಿಸುವುದು ಸರಿಯಲ್ಲ. ಈ ಸಮುದಾಯದವರು ಹಲವಾರು ವರ್ಷಗಳ ಹಿಂದೆ ರಾಜ್ಯದಲ್ಲಿ ಬಂದು ಕನ್ನಡ ಕಲಿತು, ದೇಶಸ್ಥ ಬ್ರಾಹ್ಮಣರೂ ನಮ್ಮ ಜತೆ ಬೆರೆತು ಕನ್ನಡಿಗರೇ ಆಗಿದ್ದಾರೆ. ದೇವೇಗೌಡರ ಕುಟುಂಬ ಸನಾತನ ಧಮಕ್ಕೆ ಗೌರವ ನೀಡಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ನಿವೇಶನ ಮಂಜೂರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚಿಸಿದ್ದಾರೆ. ಅವರ ಬಗ್ಗೆ ಬ್ರಾಹ್ಮಣ ಸಮುದಾಯಕ್ಕೆ ಗೌರವವಿದೆ. ಆದರೂ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುವ ಭರದಲ್ಲಿ ಸಮುದಾಯದ ಘನತೆಗೆ ಅಗೌರವ ತರುವ ಕೆಲಸ ಮಾಡಬಾರದು ಎಂದಿದ್ದಾರೆ.

See also  'ನಾವೆಲ್ಲರೂ ದ್ವಿಲಿಂಗಿಗಳು, ಡಿಂಪಲ್‌ ಯಾದವ್‌ ಮೇಲೆ ನನಗೆ ಕ್ರಶ್‌ ಆಗಿದೆ' ಬಾಲಿವುಡ್‌, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಸ್ವರಾ ಭಾಸ್ಕರ್‌ ಹೇಳಿಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget