ಕೆವಿಜಿ ಕ್ಯಾಂಪಸ್‌

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ “CME” ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ, ತಜ್ಞ ವೈದ್ಯರಿಂದ ವಿಚಾರ ವಿನಿಮಯ

ನ್ಯೂಸ್ ನಾಟೌಟ್: ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಪ್ರತಿ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ಅಭಿಯಾನ ನಡೆಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಒಂದು ದಿನದ “CME” ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಮಂಗಳವಾರ (ಅ.29 ) ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಒ.ಎಲ್.ಇ.(ರಿ.) ಸುಳ್ಯ ಇದರ ಅಧ್ಯಕ್ಷ ಡಾ ಕೆವಿ ಚಿದಾನಂದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಡೀನ್ ಡಾ| ನೀಲಾಂಬಿಕೈ ನಟರಾಜನ್, ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಬ್ರೆಸ್ಟ್ ಸರ್ಜನ್ ಡಾ| ಬಸಿಲಾ ಅಮೀರ್ ಆಲಿ ಹಾಗೂ ಮಂಗಳೂರಿನ ಕನಚ್ಚೂರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಚೀಫ್ ಮೆಡಿಕಲ್ ಅಂಕೋಲಾಜಿಸ್ಟ್ ಡಾ| ಗುರುಪ್ರಸಾದ್ ಭಟ್, ಪೆತಾಲಜಿ ವಿಭಾಗ ಮುಖ್ಯಸ್ಥೆ ಡಾ| ಸತ್ಯವತಿ ಆರ್ ಆಳ್ವ, ಕಾರ್ಯಕ್ರಮದ ಸಂಯೋಜಕರು ಹಾಗೂ ಜನರಲ್ ಸರ್ಜರಿ ವಿಭಾಗ ಮುಖ್ಯಸ್ಥ ಡಾ| ಗೋಪಿನಾಥ್ ಪೈ, ಜನರಲ್ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ರಂಜಿತ್ ಕೆ ಬಿ ಹಾಗೂ ಡಾ ನಿಖಿಲ್ ಎನ್ ಜಿ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಯಿತು. ಡಾ| ಗೋಪಿನಾಥ್ ಪೈ ಜಿ.ಪಿ” Introduction to breast cancer” ಕುರಿತು ಮಾಹಿತಿ ನೀಡಿದರು. ಬಳಿಕ ಡಾ| ಬಸಿಲಾ ಅಮೀರ್ ಆಲಿ ” Surgical Management in Early Breast cancer” ಕುರಿತು ಮಾತನಾಡಿದರು. ನಂತರ ಡಾ| ಸತ್ಯವತಿ ಆರ್ ಆಳ್ವ “Histopathalogical aspects of breast cancer” ಎಂಬ ವಿಷಯದ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಡಾ| ಗುರುಪ್ರಸಾದ್ ಭಟ್ “Strategies In Management Of Breast Cancer” ಬಗ್ಗೆ ವಿಚಾರ ವಿನಿಮಯ ಮಾಡಿದರು.

ಕಾರ್ಯಕ್ರಮದಲ್ಲಿ ಎಮ್.ಬಿ.ಬಿ.ಎಸ್ ವಿದ್ಯಾರ್ಥಿಗಳಾದ ಶಮಾ ಮತ್ತು ನಿಕ್ಷೇಪ್ ಪ್ರಾರ್ಥಿಸಿದರು. ಡಾ| ಗೋಪಿನಾಥ್ ಪೈ ಸ್ವಾಗತಿಸಿದರು, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಆಯುರ್ವೇದ ಸಪ್ತಾಹ ಕಾರ್ಯಕ್ರಮ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಸುಳ್ಯ: ನೆಹರೂ ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಅಂತರ್ ತರಗತಿ ಫೆಸ್ಟ್ ಸಂಭ್ರಮ – 2k24