ಸುಳ್ಯ

ಜೋಸ್ ಆಲುಕ್ಕಾಸ್‌ ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ನಟ ಆರ್. ಮಾಧವನ್ ಹಾಗೂ ನಟಿ ಕೀರ್ತಿ ಸುರೇಶ್ ಆಯ್ಕೆ

389

ನ್ಯೂಸ್ ನಾಟೌಟ್: ದೇಶದ ಮುಂಚೂಣಿ ಆಭರಣ ಸಂಸ್ಥೆಯಾಗಿರುವ ಜೋಸ್ ಆಲುಕ್ಕಾಸ್‌ ತನ್ನ ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ದಕ್ಷಿಣ ಭಾರತದ ಪ್ರಸಿದ್ಧ ನಟ ಆರ್. ಮಾಧವನ್ ಅವರನ್ನು ನೇಮಕ ಮಾಡಿದೆ. ಇನ್ನೋರ್ವ ಜನಪ್ರಿಯ ನಟಿ ಕೀರ್ತಿ ಸುರೇಶ್ ಆಭರಣ ಸಮೂಹದ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರಿಯಲಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಈ ಇಬ್ಬರೂ ಸಿನಿಮಾ ಕಲಾವಿದರು ಜೋಸ್‌ ಆಲುಕ್ಕಾಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದರು. ಭಾರತದಾದ್ಯಂತ ಆಭರಣ ಸಮೂಹದ ಬ್ರಾಂಡ್ ಪಿಲಾಸಫಿಯನ್ನು ಪಸರಿಸುವ ಉದ್ದೇಶದಿಂದ ಮಾಧವನ್‌ ಅವರನ್ನು ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಜೋಸ್ ಆಲುಕ್ಕಾಸ್‌ ಮೂಲಗಳು ತಿಳಿಸಿವೆ. ತನ್ನ ಮಳಿಗೆಗಳನ್ನು ವಿಸ್ತರಿಸುವ ಯೋಜನೆಯನ್ನು ಜೋಸ್‌ ಆಲುಕ್ಕಾಸ್‌ ಹಾಕಿಕೊಂಡಿದ್ದು ಇದರಲ್ಲಿ ಈ ಇಬ್ಬರೂ ಸ್ಟಾರ್‌ಗಳ ಪಾತ್ರ ಮಹತ್ವದ್ದಾಗಿರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಜೋಯ್‌ ಆಲುಕ್ಕಾ ಹೇಳಿದ್ದಾರೆ .

See also  ಸುಳ್ಯ: ಕುಸಿದು ಬಿದ್ದ ಎಲೆಕ್ಟ್ರಿಷಿಯನ್ ಸತ್ಯ, ಮಂಗಳೂರಿನ ಆಸ್ಪತ್ರೆಗೆ ಶಿಫ್ಟ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget