ಕರಾವಳಿಕೊಡಗುಕ್ರೈಂ

ಮಡಿಕೇರಿ-ಸಂಪಾಜೆ: ಹೃದಯಾಘಾತಕ್ಕೆ ಯುವಕ ಬಲಿ, ಪತ್ನಿ ಮನೆಯಲ್ಲಿಲ್ಲದ ವೇಳೆ ನಡೆಯಿತು ದುರಂತ..!

ನ್ಯೂಸ್ ನಾಟೌಟ್: ಬದುಕಿ ಬಾಳಬೇಕಾಗಿದ್ದ ಯುವಕನೋರ್ವ ಹಠಾತ್ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಇದೀಗ ಮಡಿಕೇರಿಯಿಂದ ವರದಿಯಾಗಿದೆ.


ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅನ್ನೋದು ಯುವಕರಲ್ಲಿ ಹೆಚ್ಚುತ್ತಿದೆ. ಹಲವಾರು ಪ್ರಕರಣಗಳು ರಾಜ್ಯದಾದ್ಯಂತ ವರದಿಯಾಗಿದೆ. ಇದೀಗ ಮಡಿಕೇರಿಯ ಸುದರ್ಶನ ಬಡಾವಣೆಯ ನಿವಾಸಿ ನಿತಿನ್ ಮೃತಪಟ್ಟಿದ್ದಾರೆ.

ಅವರಿಗೆ 35 ವರ್ಷ ವಯಸ್ಸಾಗಿತ್ತು. ಜೆಟಿ ಸರ್ಕಲ್ ಪೆಟ್ರೋಲ್ ಬಂಕ್ ನಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವೇಣು ಅವರ ಪುತ್ರರಾಗಿದ್ದಾರೆ. ಇವರು ಸಂಪಾಜೆಯ ಶ್ವೇತಾ ಬಾಚಿಗದ್ದೆ ಅವರ ಪತಿಯಾಗಿದ್ದಾರೆ. ಮೃತರು ಪುಟ್ಟ ಮಗುವನ್ನು ಕುಟುಂಬ ವರ್ಗ ಸ್ನೇಹಿತರನ್ನು ಅಗಲಿದ್ದಾರೆ. ಪತ್ನಿ ಮನೆಯಿಂದ ಕೆಲಸ ನಿಮಿತ್ತ ಹೊರಗಿದ್ದಾಗ ದುರ್ಘಟನೆ ನಡೆದಿದೆ. ಮನೆಗೆ ವಾಪಸ್ ಬಂದಾಗ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

Related posts

ಹುಟ್ಟೂರಿನಲ್ಲೇ ಕಿರುತೆರೆ ನಟಿ ಶೋಭಿತಾ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ, ಇಂದೇ(ಡಿ.3) ಅಂತ್ಯಕ್ರಿಯೆ

ಮಡಿಕೇರಿಯ ದಸರಾದಲ್ಲಿ ಜನರ ಗಮನಸೆಳೆಯುತ್ತಿದೆ ಕಾಂತಾರ ದೈವದ ಕಲಾಕೃತಿ ,ಸೆಲ್ಫಿ ತೆಗೆದು ಸಂಭ್ರಮಿಸಿದ ಕಲಾಸಕ್ತರು

ಉಜಿರೆ ಪತ್ರಿಕೋದ್ಯಮ ಹಿರಿಯ ವಿದ್ಯಾರ್ಥಿ, ಯುವ ಪತ್ರಕರ್ತ ರಸ್ತೆ ಅಪಘಾತಕ್ಕೆ ಬಲಿ, 1 ತಿಂಗಳ ಜೀವನ್ಮರಣ ಹೋರಾಟ, ಫಲಿಸದ ಚಿಕಿತ್ಸೆ