ನ್ಯೂಸ್ ನಾಟೌಟ್: ಬ್ರೇಕಪ್ ಆಗಿದ್ದಕ್ಕೆ ಬೇಸರಗೊಂಡ ಯುವತಿ ಪ್ರಿಯಕರನ ಕೈಬೆರಳನ್ನೇ ಕತ್ತರಿಸಿ ಫ್ರಿಜ್ ನೊಳಗಿಟ್ಟ ಘಟನೆ ಜಪಾನ್ ನಲ್ಲಿ ನಡೆದಿದೆ.
ಆರೋಪಿ ಯುವತಿ ಪ್ರಿಯಕರನನ್ನು ತುಂಬಾ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆತ ಆಕೆಯಿಂದ ದೂರಾಗುತ್ತಿರುವುದು ಗೊತ್ತಾಗಿ, ತಾನು ಉಂಗುರ ಹಾಕಬೇಕಿದ್ದ ಬೆರಳಿಗೆ ಮತ್ಯಾರೂ ಹಾಕಬಹುದು ಎನ್ನುವ ಕೋಪದಲ್ಲಿ ಆಕೆಯ ಉಂಗುರದ ಬೆರಳನ್ನೇ ಕತ್ತರಿಸಿ ಫ್ರಿಜ್ ನಲ್ಲಿಟ್ಟಿದ್ದಾಳೆ.
ಜಪಾನ್ ನ ಹೊನ್ಶು ದ್ವೀಪದ ಕನ್ಸೈ ಪ್ರದೇಶದ ಒಸಾಕಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, 21 ವರ್ಷದ ವ್ಯಕ್ತಿ ಸ್ವತಃ ಪೊಲೀಸರಿಗೆ ಕರೆ ಮಾಡಿ ತನಗೆ ಸಂಭವಿಸಿದ ಈ ಭಯಾನಕ ಘಟನೆಯ ಬಗ್ಗೆ ತಿಳಿಸಿದ್ದಾನೆ.
ಬ್ರೇಕಪ್ ಬಗ್ಗೆ ವಾಗ್ವಾದ ನಡೆದ ನಂತರ ತನ್ನ ಗೆಳತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಯುವಕ ಹೇಳಿದ್ದಾನೆ. ಇದಾದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿದಾಗ, ಇಬ್ಬರು ಫ್ಲಾಟ್ ನಲ್ಲಿಯೇ ಪತ್ತೆಯಾಗಿದ್ದಾರೆ. ಆ ಯುವಕನ ಎಡ ಕೆನ್ನೆ ಮತ್ತು ಮೂಗಿನ ಮೇಲೆ ಗಾಯದ ಗುರುತುಗಳಿದ್ದವು.
ವರದಿಯ ಪ್ರಕಾರ, 2023 ರಲ್ಲಿ, ಆತ 19 ವರ್ಷದವನಾಗಿದ್ದಾಗ ಅವನು ಆಕೆಯ ಕೆಲವು ಚಿತ್ರಗಳನ್ನು ಆನ್ ಲೈನ್ ನಲ್ಲಿ ನೋಡಿದ್ದ ಮತ್ತು ಆಕರ್ಷಿತನಾಗಿದ್ದ. ಸ್ವಲ್ಪ ಸಮಯದ ನಂತರ, ಇಬ್ಬರೂ ಸಂಬಂಧ ಬೆಳೆಸಿಕೊಂಡರು ಮತ್ತು 2024 ರ ಜುಲೈನಿಂದ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು.
ಆಕೆಗೆ ಹುಡುಗ ಆಕೆ ಹೇಳಿದ್ದಕ್ಕೆಲ್ಲಾ ಸೈ ಎನ್ನುವುದಷ್ಟೇ ಬೇಕಿತ್ತು ಎನ್ನಲಾಗಿದೆ. ಅವನ ಬ್ಯಾಂಕ್ ಪಾಸ್ ಬುಕ್ ಮತ್ತು ಅವನ ಸ್ಮಾರ್ಟ್‌ಫೋನ್ ಅನ್ನು ವಶಪಡಿಸಿಕೊಂಡಿದ್ದಳು ಎನ್ನಲಾಗಿದೆ.
ಆತ ಬ್ರೇಕಪ್ ಬಗ್ಗೆ ಮಾತನಾಡುವಾಗ,ಆಕೆ ಚಾಕುವಿನಿಂದ ಯುವಕನ ಉಂಗುರದ ಬೆರಳನ್ನು ಕತ್ತರಿಸಿ ಮದ್ಯದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟಿದ್ದಾಳೆ. ಆದರೆ, ಆರೋಪಿ ಗೆಳತಿ ಹೇಳುವುದೇನೆಂದರೆ, ಆ ಯುವಕನೇ ಇದನ್ನು ಮಾಡಿದ್ದಾನೆ ಎಂದು ಹೇಳಿದ್ದಾಳೆ. ಈ ಬಗ್ಗೆ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಾಕ್ ನಲ್ಲಿರುವ ಭಯೋತ್ಪಾದಕರು ಈಗ ಧರ್ಮಗುರುಗಳಾಗಿದ್ದಾರೆ ಎಂದ ಪಾಕ್ ನ ರಕ್ಷಣಾ ಸಚಿವ..! ಎನಿದು ಹುಚ್ಚು ಹೇಳಿಕೆ..?