ಕ್ರೈಂ

ಜೇಡ ಮುಖಕ್ಕೆ ಕಚ್ಚಿ ಖ್ಯಾತ ಗಾಯಕ ದುರಂತ ಅಂತ್ಯ,ಕೇವಲ 28ನೇ ವಯಸ್ಸಿಗೆ ಉಸಿರು ಚೆಲ್ಲಿದ ಸಿಂಗರ್..!

ನ್ಯೂಸ್ ನಾಟೌಟ್ :ಜೇಡವೊಂದು ಕಚ್ಚಿ ಖ್ಯಾತ ಗಾಯಕನೋರ್ವ ದುರಂತ ಅಂತ್ಯ ಕಂಡಿರುವ ಘಟನೆ ವರದಿಯಾಗಿದೆ.ಅಪಾರ ಅಭಿಮಾನಿಗಳನ್ನು ತನ್ನ ಕಂಚಿನ ಕಂಠದಿಂದ ಸೆಳೆಯುವಂತೆ ಮಾಡಿದ್ದ ಗಾಯಕನ ಈ ದುರಂತ ಸುದ್ದಿ ನಿಜಕ್ಕೂ ಆಘಾತಕಾರಿ ಎಂಬಂತಿದೆ.

ಅತೀ ಸಣ್ಣ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ಸಂಗೀತ ಕ್ಷೇತ್ರಕ್ಕೆ ಧುಮುಕಿದ್ದ ಖ್ಯಾತ ಗಾಯಕ ಡಾರ್ಲಿನ್ ಮೊರೈಸ್ ಜೇಡ ಕಚ್ಚಿಸಿಕೊಂಡು ಬಾರದ ಲೋಕಕ್ಕೆ ತೆರಳಿದ್ದಾರೆ. ಬ್ರೆಜಿಲಿಯನ್ ನ ಈ ಗಾಯಕನಿಗೆ  ಕೇವಲ 28 ವರ್ಷ ವಯಸ್ಸಾಗಿತ್ತು. ಅತೀ ಕಡಿಮೆ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ.

ಜೇಡ ಕಚ್ಚಿದ ದಿನವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಕೂಡ ಪಡೆದಿದ್ದರು. ಮನೆಗೆ ಬಂದ ಬಳಿಕ ತೀವ್ರ ಆಯಾಸದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.ಈ ನಡುವೆ ದಿನದಿಂದ ದಿನಕ್ಕೆ ಅವರ ದೇಹದ ಬಣ್ಣ ಕೂಡ ಬದಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಧಿಲೀಲೆ ಎಂದರೆ ಚಿಕಿತ್ಸೆ ಫಲಕಾರಿಯಾಗದೇ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ.ಅಗಲಿದ ಗಾಯಕನಿಗೆ ಅನೇಕ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Related posts

ಸಂಪಾಜೆ: ಅಪಘಾತಕ್ಕೆ ಸಿಲುಕಿದ್ದ ಮಗುವಿನ ರಕ್ಷಣೆಗೆ ನಿಂತ ಯುವಕನ ಪರ್ಸ್ ಸಹಿತ 16,000 ರೂ. ಕಾಣೆ..!

ಸೌಜನ್ಯ ಭೀಕರ ಅತ್ಯಾಚಾರ- ಕೊಲೆ ಪ್ರಕರಣ : ಸಂತೋಷ್ ರಾವ್‌ ನಿರಪರಾಧಿ, ಸಿಬಿಐ ವಿಶೇಷ ಕೋರ್ಟ್ ಆದೇಶ

ಸುಳ್ಳು ಹೇಳಿ ರವೀಂದರ್‌ ನನ್ನನ್ನು ಮದುವೆಯಾದ ಎಂದು ಬೇಸರ ತೋಡಿಕೊಂಡದ್ದೇಕೆ ನಟಿ! ಮೌನ ಮುರಿದ ಮಹಾಲಕ್ಷ್ಮೀ ಹೇಳಿದ್ದೇನು? ಜನು ಜನುಮದ ಅನುಬಂಧ ಎನ್ನುತ್ತಿದ್ದ ಜೋಡಿಗೆ ಒಂದು ವರ್ಷದೊಳಗೆ ಏನಾಯ್ತು?