ಬ್ರಹ್ಮಾಂಡ ಗುರೂಜಿ ನುಡಿದ ಸ್ಫೋಟಕ ಭವಿಷ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ. ಹಾಸನಾಂಬೆ ದೇವಿ ದರ್ಶನ ಪಡೆಯಲು ಬಂದಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಂತೆ ಗುರೂಜಿಯವರು ಕರ್ನಾಟಕ ರಾಜ್ಯದ ಬಗ್ಗೆ ಭವಿಷ್ಯ ನುಡಿದಿದ್ದರು.
ಏನದು ಭವಿಷ್ಯ:
ಬ್ರಹ್ಮಾಂಡ ಗುರೂಜಿ ನುಡಿದ ಸ್ಫೋಟಕ ಭವಿಷ್ಯದಲ್ಲಿ ಮುಂದಿನ 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಅಗಿ, 3 ಮುಖ್ಯಮಂತ್ರಿ, 3 ರಾಜ್ಯಪಾಲರಾಗುತ್ತಾರೆ ಎಂದು ಹೇಳಿದ್ದಾರೆ. ಇದು ಶಿವನ ಅಣೆಗೂ ಸತ್ಯ ಎಂಬ ಭವಿಷ್ಯ ನುಡಿದಿದ್ದಾರೆ.ದೇಶದಲ್ಲಿ ಲಂಚ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇನ್ಮೇಲೆ ದೇಶದ ಮೇಲೆ, ಜನರ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತದೆ. ಮೊದಲು ಕದ್ದುಮುಚ್ಚಿ ಲಂಚ ತೆಗೆದುಕೊಳ್ಳುತ್ತಿದ್ದರು. ಈಗ ಎಲ್ಲಾ ಓಪನ್, ದಡಂ ದಶಗುಣಂ ಭಗವಂತ ಆ ಸಮಯಕ್ಕೆ ಬಂದೇ ಬರುತ್ತಾನೆ ಎಂದಿದ್ದಾರೆ.