ಕರಾವಳಿ

ಬಿಪಿಎಲ್ ಕಾರ್ಡ್ ಪತ್ತೆಗೆ ಮನೆ ಬಾಗಿಲಿಗೆ ಬರ್ತಾರೆ ಹುಷಾರ್..!

ನ್ಯೂಸ್ ನಾಟೌಟ್ : ಆರ್ಥಿಕವಾಗಿ ನೀವು ಶ್ರೀಮಂತರಾಗಿದ್ದೂ, ಬಡವರಿಗೆ ನೀಡುವ ಬಿಪಿಎಲ್ (ಪಡಿತರ ಕಾರ್ಡ್) ಕಾರ್ಡ್ ಅನ್ನು ಬಳಸಿಕೊಂಡು ರೇಷನ್ ತಗೋತಿದ್ದೀರಾ ? ಹಾಗಾದ್ರೆ ನಿಮಗೆ ಬಡ್ಡಿ ಸಹಿತ ದಂಡ ಬೀಳುವುದು ಖಚಿತ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿಯೇ ಹಲವಾರು ಮಂದಿಯ ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮಾತ್ರವಲ್ಲ ಅವರಿಂದ ಭಾರಿ ದಂಡವನ್ನೂ ಕಕ್ಕಿಸಲಾಗಿದೆ.

ಇದೀಗ ಅಕ್ರಮ ಕಾರ್ಡ್ ಪತ್ತೆಗಾಗಿ ಆಹಾರ ಇಲಾಖೆ ಅಧಿಕಾರಿಗಳು ಮನೆಮನೆ ಭೇಟಿ ನೀಡಿ ಶೋಧ ಕಾರ್ಯ ಆರಂಭಿಸಿದ್ದಾರೆ. ಅಕ್ರಮವಾಗಿ ಕಾರ್ಡ್ ಪಡೆದು ರೇಷನ್ ಪಡೆಯುತ್ತಿದ್ದ ಆರ್ಥಿಕ ಸ್ಥಿತಿವಂತರೂ ಕ್ರಿಮಿನಲ್ ಪ್ರಕರಣಕ್ಕೆ ಹೆದರಿ ಕಳೆದ ಆರು ತಿಂಗಳಿನಲ್ಲಿ 61,919 ಬಿಪಿಎಲ್ ಮತ್ತು 1,658 ಅಂತ್ಯೋದಯ ಸೇರಿ ಒಟ್ಟು 63,577 ಪಡಿತರ ಕಾರ್ಡ್ ಗಳನ್ನು ವಾಪಸ್ ಮಾಡಿದ್ದಾರೆ. 2020ರ ಜ.31ರೊಳಗೆ ಆಯಾ ತಾಲೂಕು ಕಚೇರಿಗೆ ಕಾರ್ಡ್ ಗಳನ್ನು ವಾಪಸ್ ಕೊಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇನ್ನೂ ಬಹುತೇಕರು ಕಾರ್ಡ್ ಗಳನ್ನು ವಾಪಸ್ ಮಾಡಿಲ್ಲ. ಹೀಗಾಗಿ ಫೆ.1ರಿಂದ ಅಧಿಕಾರಿಗಳು ಅಕ್ರಮ ಕಾರ್ಡ್ ಗಳನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಅಕ್ರಮ ಕಾರ್ಡ್ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಮಂಗಳೂರು ಒಂದರಲ್ಲೇ 30 ಲಕ್ಷ ರೂ ದಂಡ ವಸೂಲಿಯಾಗಿದ್ದ ಇನ್ನೂ ದಂಡ ಪ್ರಮಾಣ ಕೋಟ್ಯಾಂತರ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಕ್ರಮವಾಗಿ ಕಾರ್ಡ್ ಪಡೆದಿರುವುದು ದೃಢ ಪಟ್ಟರೆ ಯಾವ ದಿನಾಂಕದಂದು ಪಡಿತರ ಪಡೆಯಲಾಗುತ್ತಿದೆಯೋ ಅಲ್ಲಿಂದ ಈಗಿನ ವರೆಗಿನ ಪ್ರತಿ ತಿಂಗಳು ಕುಟುಂಬದ ಸದಸ್ಯರು ಪಡೆಯುತ್ತಿರುವ ಪ್ರತಿ ಕೆ.ಜಿ ಅಕ್ಕಿಗೆ 28ರೂ.ನಂತೆ ಲೆಕ್ಕ ಹಾಕಿ ದಂಡ ವಿಧಿಸಲಾಗುತ್ತದೆ. ಒಂದು ಕಾರ್ಡ್ ನಲ್ಲಿ 3 ಅಥಾವ 4 ಸದಸ್ಯರು ಇದ್ದರೂ ಅವರು ಪಡೆದಿರುವ ಪಡಿತರ ಲೆಕ್ಕ ಹಾಕಿ ವಸೂಲಿ ಮಾಡಲಾಗುತ್ತದೆ. ಹಾಗೂ ಕಾರ್ಯಾಚರಣೆ ವೇಳೆಯಲ್ಲಿ ಸಿಕ್ಕಿಬೀಳುವ ಕಾರ್ಡ್ ಗಳಿಗೆ ದಂಡ ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

ಇಸ್ರೋ ಸಂಸ್ಥೆಯ “ಸ್ಪೇಸ್ ಆನ್ ವ್ಹೀಲ್” ಮೊಬೈಲ್ ಬಸ್ ಸುಳ್ಯಕ್ಕೆ ಆಗಮನ..! ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋದ ಸಾಧನೆಗಳನ್ನು ಪರಿಚಯಿಸುವ ಬಸ್‌ನಲ್ಲಿ ಏನೇನಿರಲಿದೆ?

ಸುಳ್ಯ:ಮಗುವಿನ ಕುತ್ತಿಗೆಯಲ್ಲಿದ್ದ ಸರ ಕಳವುಗೈದ ಖತರ್ನಾಕ್ ಕಳ್ಳ!,ನೊಂದ ಫೋಷಕರಿಂದ ಪೊಲೀಸ್ ಕಂಪ್ಲೆಂಟ್

ಸುಳ್ಯ: ಪ್ರತಿಷ್ಠಿತ ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅತ್ಯುತ್ತಮ ತರಬೇತಿ ಕೇಂದ್ರ