ದೇಶ-ಪ್ರಪಂಚರಾಜ್ಯ

ವಿದ್ಯಾರ್ಥಿಯನ್ನು ಅಪಹರಿಸಿ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗ ಥಳಿಸಿದ ಅನ್ಯಕೋಮಿನ ಯುವಕರು!!ಮನೆಗೆ ಡ್ರಾಪ್ ಕೊಡುವ ನೆಪದಲ್ಲಿ ಬಾಲಕನನ್ನು ಕಿಡ್ನಾಪ್ ಮಾಡಿದ್ದೇಕೆ?

ನ್ಯೂಸ್‌ ನಾಟೌಟ್‌:ಎಸ್​​ಎಸ್​​ಎಲ್​​ಸಿ ವಿದ್ಯಾರ್ಥಿಯನ್ನು ಕಿಡ್ನಾಪ್ ​ ಮಾಡಿರುವ ಘಟನೆ ಬಗ್ಗೆ ಮಾರ್ಚ್‌ 20ರಂದು ವರದಿಯಾಗಿದೆ. ರಾಕೇಶ್ ಕಿಡ್ನಾಪ್ ಆದ ವಿದ್ಯಾರ್ಥಿಯೆಂದು ತಿಳಿದು ಬಂದಿದೆ.

ಶಿವಮೊಗ್ಗದ ರಾಜೇಂದ್ರ ನಗರ 100 ಅಡಿ ರಸ್ತೆ ಬಳಿ ಇರುವ ಖಾಸಗಿ ಶಾಲೆಯಿಂದ ಸಂಜೆ ಮನೆಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಡ್ರಾಪ್ ಕೊಡುವುದಾಗಿ ಹೇಳಿ ಇಬ್ಬರು ಅನ್ಯಕೋಮಿನ ಯುವಕರಿಂದ ಕಿಡ್ನಾಪ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗ ಹೊರವಲಯದ ಕಲ್ಲುಗಂಗೂರು ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಯುವಕರು ವಿದ್ಯಾರ್ಥಿಯ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ತಿಳಿದು ಬಂದಿದೆ.

ಈ ವೇಳೆ ವಿದ್ಯಾರ್ಥಿಗೆ ಕಿವಿಗೆ ಕಚ್ಚಿ ಗಾಯ ಮಾಡಿದ್ದು,ಗಾಯಗೊಂಡ ವಿದ್ಯಾರ್ಥಿಯನ್ನು ಯುವಕರು ಸ್ಥಳದಲ್ಲೇ ಬಿಟ್ಟು ಪರಾರಿ ಆಗಿದ್ದಾರೆ. ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿಯನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ. ಬಳಿಕ ಪೋಷಕರಿಗೆ ಘಟನೆ ಕುರಿತು ಮಾಹಿತಿ ನೀಡಲಾಗಿದೆ.

Related posts

700 ಗ್ರಾಂ ಚಿನ್ನವನ್ನು ಗುದನಾಳದಲ್ಲಿಟ್ಟುಕೊಂಡು ಪ್ರಯಾಣಿಸುತ್ತಿದ್ದ ಮಹಿಳೆಯರು! ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೇಗೆ?

ಇಸ್ರೇಲ್‌ನಲ್ಲಿ ಉಗ್ರರಿಂದ ಸಹೋದರಿ – ಬಾವನ ಹತ್ಯೆ, ಕಣ್ಣೀರಿಟ್ಟು ದಾರುಣ ಘಟನೆ ಬಗ್ಗೆ ಬಿಚ್ಚಿಟ್ಟ ‘ನಾಗಿನ್’ ನಟಿ ಮಧುರಾ ನಾಯ್ಕ್

ಭೀಕರ ರೈಲು ದುರಂತದ ಬೆನ್ನಲ್ಲೇ ಮುನ್ನೆಲೆಗೆ ಬಂತು ಅಂದು ಸುಬ್ರಹ್ಮಣ್ಯದಲ್ಲಿ ಸಂಭವಿಸಿದ್ದ ಘನಘೋರ ಬಸ್ಸು ದುರಂತ..! ಅಂದು ಶವಗಳನ್ನೆತ್ತಿ ನೆರವಾಗಿದ್ದ ಸುಳ್ಯದ ಉದ್ಯಮಿ ಹೇಳಿದ್ದೇನು?