Uncategorized

ಮೆದುಳು ಜ್ವರಕ್ಕೆ ಬಾಲಕ ಬಲಿ , ಏನಿದು ಹೃದಯವಿದ್ರಾವಕ ಘಟನೆ ?

ನ್ಯೂಸ್‌ ನಾಟೌಟ್ :ಮೆದುಳು ಜ್ವರಕ್ಕೆ (Brain Fever) ಬಾಲಕ ಬಲಿಯಾದ ಹೃದಯವಿದ್ರಾವಕ ಘಟನೆ ಬಗ್ಗೆ ವರದಿಯಾಗಿದೆ. ವಿಜಯಪುರ ನಗರದ ಗೋಳಗುಮ್ಮಟ ಏರಿಯಾದಲ್ಲಿ ಈ ಘಟನೆ ನಡೆದಿದ್ದು,ಮೃತ ಬಾಲಕನನ್ನು ರಜಿತ್ ಮಿಥುನ್ ಅಳ್ಳಿಮೋರೆ (10) ಎಂದು ಗುರುತಿಸಲಾಗಿದೆ. ಈತ ಗೋಳಗುಮ್ಮಟ ಬಡವಾಣೆ ನಿವಾಸಿ ಎಂದು ತಿಳಿದು ಬಂದಿದೆ.

ಕಳೆದ ವಾರದ ಹಿಂದೆ ರಜಿತ್ ತೀವ್ರ ಜ್ವರದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ರಜಿತ್ ನನ್ನು ದಾಖಲಿಸಲಾಗಿತ್ತು. ಜ್ವರ ನೆತ್ತಿಗೆ ಏರಿ ಮೆದುಳಲ್ಲಿ ಕಾಣಿಸಿಕೊಂಡ ಬಾವು ಬಂದಿತ್ತು. ಈ ಕಾರಣದಿಂದಾಗಿ ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆಂದು ತಿಳದು ಬಂದಿದೆ.ಬಾಲಕನನ್ನು ಕಳೆದು ಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related posts

ಓಮೈಕ್ರಾನ್: ಕರ್ನಾಟಕದಲ್ಲಿ ಡಿ.28ರಿಂದ ರಾತ್ರಿ ಕರ್ಫ್ಯೂ

ಕೆವಿಜಿ ಕ್ಯಾಂಪಸ್ ನ್ಯೂಸ್: ಒಂದು ಕ್ಯಾಂಪಸ್ ಹಲವು ವಿಭಿನ್ನ ಕಾರ್ಯಕ್ರಮ, ಒಂದು ಕ್ಲಿಕ್ ಕ್ಯಾಂಪಸ್ ನ ಹಲವು ಅಪ್ಡೇಟ್ಸ್ ಇಲ್ಲಿದೆ ವೀಕ್ಷಿಸಿ

ಉದ್ಯೋಗಾಸಕ್ತರಿಗೆ ಕೇಂದ್ರ ಸರಕಾರದಿಂದ ಬಿಗ್ ನ್ಯೂಸ್