ಕ್ರೈಂವೈರಲ್ ನ್ಯೂಸ್

ಬೋರ್​ವೆಲ್​ಗೆ ಬಿದ್ದ ವೃದ್ಧೆಯನ್ನು ಹೊರತೆಗೆದದ್ದೇಗೆ? 80 ವರ್ಷದ ಅಜ್ಜಿ ಬಿದ್ದ ಕೊಳವೆ ಬಾವಿಯೊಳಗೆ ಹಾವಿತ್ತಾ..? ಮುಂದೇನಾಯ್ತು?

ನ್ಯೂಸ್‌ ನಾಟೌಟ್‌: 80 ವರ್ಷದ ವೃದ್ಧೆಯೊಬ್ಬರು 20 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದಾರೆ. ಹಲವಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಂಭೀರ ಸ್ಥಿತಿಯಲ್ಲಿ ವೃದ್ಧೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಒಡಿಶಾದ ಸುವರ್ಣಪುರ ಜಿಲ್ಲೆಯ ಕೆಕುಫುಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸುವರ್ಣಪುರ ಜಿಲ್ಲೆಯ ಗೋಬಿಂದಪುರ ಗ್ರಾಮದಲ್ಲಿ ತನ್ನ ಮಗಳ ಮನೆಗೆ ಸಂತ್ರಸ್ತೆ ದುಖಿ ನಾಯ್ಕ್​ ಬಂದಿದ್ದರು. ಸೋಮವಾರ ಸೋನ್‌ಪುರ ಬುರ್ದಾ ರಸ್ತೆಯ ಕನೆಫುಲ್ ಗ್ರಾಮಕ್ಕೆ ಕಸಬರಿಕೆ ತಯಾರಿಸಲು ಗರಿಗಳನ್ನು ಹಾರಿಸಲು ತೆರಳಿದ್ದರು. ಅಷ್ಟರಲ್ಲಿ ಅಲ್ಲಿಯೇ ಇದ್ದ ಬೋರ್‌ವೆಲ್‌ಗೆ ಬಿದ್ದಿದ್ದಾರೆ. ಈ ಸಂಗತಿ ಯಾರಿಗೂ ತಿಳಿಯದೆ ತುಂಬಾ ಹೊತ್ತು ಅಜ್ಜಿ ಒದ್ದಾಡಿದ್ದಾರೆ ಎನ್ನಲಾಗಿದೆ.
ವೃದ್ಧೆ ನಾಪತ್ತೆಯಾದ ಕಾರಣ ಸಂಬಂಧಿಕರು ಮತ್ತು ಸ್ಥಳೀಯರು ರಾತ್ರಿಯಿಡೀ ಹುಡುಕಿದರು ಪ್ರಯೋಜನವಾಗಿರಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ಬೋರ್‌ವೆಲ್‌ನಲ್ಲಿ ಆಕೆ ಪತ್ತೆಯಾಗಿದ್ದು, ಕೂಡಲೇ ಅಗ್ನಿಶಾಮಕ ಸೇವೆಗಳು ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿತು ಎನ್ನಳಾಗಿದೆ.
ವೃದ್ಧೆಗೆ ಕಿವಿ ಕೇಳಿಸುತ್ತಿರಲಿಲ್ಲ ಎನ್ನಲಾಗಿದ್ದು, ರಕ್ಷಣಾ ತಂಡವು ವೃದ್ಧೆಯ ಉಸಿರಾಟಕ್ಕೆ ಸಹಾಯ ಮಾಡಲು ಬೋರ್‌ವೆಲ್‌ಗೆ ಆಮ್ಲಜನಕವನ್ನು ಪೂರೈಸಿತ್ತು. ಆಕೆಯನ್ನು ಬೋರ್​ವೆಲ್​ನಿಂದ ಹೊರಗೆ ತರಲು ಬೋರ್​ವೆಲ್​ ಪಕ್ಕದಲ್ಲಿ ಜೆಸಿಬಿ ಮೂಲಕ ಭೂಮಿಯನ್ನು ಅಗೆಯಲಾಯಿತು. ಸುಮಾರು 10 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ವೃದ್ಧೆಯನ್ನು ರಕ್ಷಿಸಲಾಯ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ರಕ್ಷಿಸಿದ ನಂತರ ಆಕೆಯ ಹೃದಯ ಬಡಿತ​ ತೀರಾ ಕಡಿಮೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಸೋನೆಪುರ ಪೊಲೀಸ್ ವರಿಷ್ಠಾಧಿಕಾರಿ ಅಮರೇಶ್ ಪಾಂಡಾ ತಿಳಿಸಿದ್ದಾರೆ. ಆದರೆ, ವೃದ್ದೆಯನ್ನು ಬದುಕಿಸಿಕೊಳ್ಳಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ,
ವೃದ್ಧೆ ಬಿದ್ದಿದ್ದ ಬೋರ್​ವೆಲ್​ನಲ್ಲಿ ಹಾವು ಕೂಡ ಪತ್ತೆಯಾದ್ದು, ಆದರೆ ಆಕೆಗೆ ಹಾವು ಕಚ್ಚಿದೆಯಾ, ಎಂಬುದು ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ನೈಜ ಕಾರಣ ತಿಳಿಯಲಿದೆ ಎಂದು ವರದಿ ತಿಳಿಸಿದೆ.

(story cr: ಈ ಟಿವಿ ಭಾರತ)

Related posts

ಕ್ರೈಸ್ತ ಮಹಿಳೆ ಹಿಂದೂ ದೇಗುಲದ ಅರ್ಚಕಿಯಾಗಿದ್ದೇಗೆ..? ಮತಾಂತರವಾಗದಿದ್ದರೂ ದೇಗುಲದಲ್ಲಿ ಪೂಜೆ ಮಾಡುತ್ತಿರುವ ಈ ಮಹಿಳೆ ಯಾರು? ಯಾವುದು ಆ ದೇಗುಲ?

ಏರ್‌ ಇಂಡಿಯಾ ವಿಮಾನ ಹಾರುತ್ತಿರುವಾಗಲೇ ಸೀಟ್‌ನಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ! ಅಡುಗೆ ಮಾಡುವಾತನ ಅನುಚಿತ ವರ್ತನೆಗೆ ಭದ್ರತಾ ಸಿಬ್ಬಂದಿ ಮಾಡಿದ್ದೇನು?

‘ಪುಷ್ಪ 2’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಲೀಕ್..! ಕಾನೂನು ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳ ಒತ್ತಾಯ..!