Latestವೈರಲ್ ನ್ಯೂಸ್ಸಿನಿಮಾ

ಶೀಘ್ರದಲ್ಲಿಯೇ ‘ಅಪ್ಪು’ ಜೀವನ ಚರಿತ್ರೆ ಪುಸ್ತಕ ಬಿಡುಗಡೆ..! ಇಲ್ಲಿದೆ ಸಂಪೂರ್ಣ ಮಾಹಿತಿ

739

ನ್ಯೂಸ್ ನಾಟೌಟ್: ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ 4 ವರ್ಷ ಕಳೆದರೂ ನಾಡಿನ ಜನರು ಅವರ ಮೇಲಿಟ್ಟಿರುವ ಅಭಿಮಾನ ಕಡಿಮೆಯಾಗಿಲ್ಲ.

ನಿನ್ನೆಯಷ್ಟೇ(ಮಾ.17) 50ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನ ಸಂಭ್ರಮ ನಡೆದಿತ್ತು. ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ಕುಮಾರ್ ಮತ್ತೊಂದು ವಿಶೇಷ ವಿಷಯ ಹಂಚಿಕೊಂಡಿದ್ದಾರೆ. ‘ಅಪ್ಪು’ ಜೀವನ ಚರಿತ್ರೆ ಶೀಘ್ರದಲ್ಲಿಯೇ ಪುಸ್ತಕ ರೂಪದಲ್ಲಿ ಹೊರಬರಲಿದೆ.

ಅಶ್ವಿನಿ ಹಾಗೂ ಪ್ರಕೃತಿ ಬನವಾಸಿ ರಚಿಸಿರುವ ಪುಸ್ತಕದ ಮುಖಪುಟ ಬಿಡುಗಡೆಯಾಗಿದೆ. ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲಿ ಪುಸ್ತಕ ರಚಿಸಲಾಗಿದೆ. ಇದಕ್ಕಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ ಎಂದು ವರದಿ ತಿಳಿಸಿದೆ.

ಅಪ್ಪು ಬರ್ತ್​ಡೇ ಸಂದರ್ಭದಲ್ಲಿ ಅಶ್ವಿನಿ ಹಾಗೂ ಮಕ್ಕಳು ಪುಸ್ತಕ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಪ್ಪು ಕಲರ್ ​ಫುಲ್ ಜೀವನವನ್ನು ತೆರೆದಿಡುವ ಪುಸ್ತಕಕ್ಕೆ ಬ್ಲ್ಯಾಕ್ ಆ್ಯಂಡ್ ವೈಟ್ ​ನ ಕವರ್ ಪೇಜ್ ಮಾಡಲಾಗಿದೆ. ಸದ್ಯದಲ್ಲೇ ಅಧಿಕೃತವಾಗಿ ‘ಅಪ್ಪು’ ಪುಸ್ತಕ ರಿಲೀಸ್ ಆಗುವ ಸಾಧ್ಯತೆಯಿದೆ.

See also  ಆ ಒಂದು ಪೋಸ್ಟ್ ನಿಂದ ನಡೆಯಿತು ಎರಡು ಗುಂಪುಗಳ ನಡುವೆ ಮಾರಾಮಾರಿ! ಓರ್ವ ಮೃತ್ಯು,ವಾಹನಗಳಿಗೆ ಬೆಂಕಿ! ಅಷ್ಟಕ್ಕೂ ಆ ಪೋಸ್ಟ್ ನಲ್ಲೇನಿತ್ತು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget