ಕ್ರೈಂದೇಶ-ವಿದೇಶಬೆಂಗಳೂರು

ಬೆಂಗಳೂರಿನ ಮೂರು 5 ಸ್ಟಾರ್ ಹೋಟೆಲ್ ​ಗಳಿಗೆ ಬಾಂಬ್​ ಬೆದರಿಕೆ..!ಮಧ್ಯರಾತ್ರಿ 2 ಗಂಟೆಗೆ ಬಾಂಬ್​ ಸ್ಫೋಟಿಸುವುದಾಗಿ ಇ-ಮೇಲ್..!

243

ನ್ಯೂಸ್ ನಾಟೌಟ್: ಬೆಂಗಳೂರಿನ ಮೂರು 5 ಸ್ಟಾರ್ ಹೋಟೆಲ್​ಗಳಿಗೆ ಇ-ಮೇಲ್ ಮೂಲಕ ಬಾಂಬ್​ ಬೆದರಿಕೆ ಸಂದೇಶ ಬಂದಿದ್ದು. ಎಲೆಕ್ಟ್ರಾನಿಕ್ ಸಿಟಿ ಬಳಿಯ ಸ್ಟಾರ್​ ಹೋಟೆಲ್​ಗೆ ಬೆದರಿಕೆ ಸಂದೇಶ ಬಂದಿದ್ದು, ಮಧ್ಯರಾತ್ರಿ 2 ಗಂಟೆಗೆ ಬಾಂಬ್​ ಸ್ಫೋಟಿಸುವುದಾಗಿ ತಿಳಿಸಲಾಗಿದೆ. ಗುರುವಾರ(ಮೇ.23) ಬೆಳಗ್ಗೆ ಹೋಟೆಲ್ ಸಿಬ್ಬಂದಿ ಮೇಲ್ ಪರಿಶೀಲಿಸಿದಾಗ ಬೆದರಿಕೆ ಸಂದೇಶ ಬೆಳಕಿಗೆ ಬಂದಿದೆ.

ತಕ್ಷಣವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಟೆಲ್​ಗೆ ಪೊಲೀಸರು ಭೇಟಿ ನೀಡಿದ್ದಾರೆ. ಬಾಂಬ್ ಸ್ಕ್ವಾಡ್ ಸಹ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ. ರಾಮೇಶ್ವರಂ ಕೆಫೆ ಪ್ರಕರಣದ ಬಳಿಕ ರಾಜ್ಯ ಮತ್ತು ದೇಶದಲ್ಲೂ ಬಾಂಬ್ ಬೆದರಿಕೆಗಳು ಹೆಚ್ಚಾಗಿವೆ. ಇದರ ಜೊತೆಗೆ ಮೇ.೨೨ ರಂದು ಕೇಂದ್ರ ಗೃಹ ಕಚೇರಿಗೂ ಬೆದರಿಕೆ ಸಂದೇಶ ಬಂದಿತ್ತು.

Click 👇

https://newsnotout.com/2024/05/prajwal-revanna-passport-issue-kannada-news
https://newsnotout.com/2024/05/hindu-muslim-case-court-issue
https://newsnotout.com/2024/05/love-women-and-boy
See also  ಚಿತ್ರೀಕರಣದ ವೇಳೆ ಕಾಲು ಮುರಿದುಕೊಂಡ ನಟಿ ಊರ್ವಶಿ ರೌಟೇಲಾ..! ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget