ದೇಶ-ವಿದೇಶ

ಯೂಟ್ಯೂಬ್ ನೋಡಿಕೊಂಡು ಬಾಂಬ್ ತಯಾರಿಸಿ ಶಿಕ್ಷಕಿಯ ಕುರ್ಚಿ ಅಡಿಯಲ್ಲಿಟ್ಟು ಸ್ಫೋಟಿಸಿದ ವಿದ್ಯಾರ್ಥಿ, ಒಬ್ಬ ಕುರ್ಚಿ ಕೆಳಗೆ ಬಾಂಬ್ ಇಟ್ಟರೆ ಮತ್ತೋರ್ವ ರಿಮೋಟ್ ಒತ್ತಿದ್ದ..!

ನ್ಯೂಸ್ ನಾಟೌಟ್: ಇಂದಿನ ದಿನಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ದೂರವಾಗುತ್ತಿದೆ. ಹಿಂದಿನಂತೆ ಗುರು-ಶಿಷ್ಯರ ನಡುವೆ ಪ್ರೀತಿ ಇಲ್ಲ. ಶಿಕ್ಷಣ ವ್ಯಾಪಾರೀಕರಣ ಆಗಿರುವುದೇ ಇದಕ್ಕೆಲ್ಲ ದೊಡ್ಡ ಕಾರಣ ಅಂದರೂ ತಪ್ಪಾಗಲಾರದು. ತಂತ್ರಜ್ಞಾನ ಬೆಳೆದಂತೆ ನಮಗೆ ಎಷ್ಟು ಸಹಾಯವಾಗುತ್ತಿದೆಯೋ ಅಷ್ಟೇ ಅನನುಕೂಲಗಳೂ ಆಗುತ್ತಿವೆ. ಯೂಟ್ಯೂಬ್ ನೋಡಿಕೊಂಡೇ ಇಲ್ಲೊಬ್ಬ ವಿದ್ಯಾರ್ಥಿ ಬಾಂಬ್ ತಯಾರಿಸಿದ್ದಾನೆ. ಮಾತ್ರವಲ್ಲ ತನಗೆ ಬೈದ ಶಿಕ್ಷಕಿಯ ಕುರ್ಚಿ ಕೆಳಗೆ ಇಟ್ಟು ಸ್ಫೋಟಿಸಿದ್ದಾನೆ.

ಅಂದ ಹಾಗೆ ಈ ಘಟನೆ ನಡೆದಿರುವುದು ಹರ್ಯಾಣದಲ್ಲಿ. ಘಟನೆಗೆ ಸಂಬಂಧಪಟ್ಟಂತೆ ಭಿವಾನಿ ಜಿಲ್ಲೆಯಲ್ಲಿ 13 ವಿದ್ಯಾರ್ಥಿಗಳನ್ನು ಒಂದು ವಾರಗಳವರೆಗೆ ಅಮನಾತುಗೊಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಶಿಕ್ಷಕರ ಕುರ್ಚಿಯ ಕೆಳಗೆ ಪಟಾಕಿಯಂತಹ ಬಾಂಬ್ ಅನ್ನು ಇರಿಸಿದ್ದರು. ಯಾವುದೋ ವಿಚಾರಕ್ಕಾಗಿ ವಿದ್ಯಾರ್ಥಿಗೆ ಶಿಕ್ಷಕರು ಬೈದಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ಕೃತ್ಯವೆಸಗಿದ್ದಾನೆ.

ಕುರ್ಚಿಯ ಕೆಳಗೆ ಬಾಂಬ್ ಇರಿಸಿ ರಿಮೋಟ್ ಮೂಲಕ ಸಿಡಿಸಿದ್ದಾರೆ. ಆ ಸ್ಫೋಟವು ಕುರ್ಚಿಯಡಿ ದೊಡ್ಡ ರಂಧ್ರ ಸೃಷ್ಟಿಸಿದೆ. ಅದೃಷ್ಟವಶಾತ್ ಶಿಕ್ಷಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಓರ್ವ ಕುರ್ಚಿಯಡಿ ಬಾಂಬ್ ಇಟ್ಟಿದ್ದರೆ ಇನ್ನೊಬ್ಬ ರಿಮೋಟ್​ನಿಂದ ಬಟನ್ ಒತ್ತಿದ್ದಾನೆ. ಘಟನೆ ನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಆಗಮಿಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ಕ್ರಮ ಕೈಗೊಂಡಿದ್ದಾರೆ. ಯೂಟ್ಯೂಬ್​ನಿಂದ ಸ್ಫೋಟಕಗಳನ್ನು ತಯಾರಿಸುವುದನ್ನು ವಿದ್ಯಾರ್ಥಿಗಳು ಕಲಿತಿದ್ದಾರೆ. ಮಕ್ಕಳನ್ನು ಶಾಲೆಯಿಂದ ಹೊರ ಹಾಕುವ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಲಕರು ಕ್ಷಮೆ ಯಾಚಿಸಿದ್ದು, ವಿದ್ಯಾರ್ಥಿಗಳು ಮುಂದೆ ಇಂತಹ ಕೆಲಸ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ನರೇಶ್ ಮೆಹ್ತಾ ತಿಳಿಸಿದ್ದಾರೆ.

Related posts

‘ಜೇಂಟ್‌ ವೀಲ್ಹ್‌’ ನಲ್ಲಿ ಕುಳಿತು ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು..! ಇಲ್ಲಿದೆ ವೈರಲ್ ವಿಡಿಯೋ

ಬಾಂಗ್ಲಾ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನುಸ್‌ ನೇಮಕ..! ಬಾಂಗ್ಲಾದೇಶದ ಸೇನೆ ಇವರಿಗೆ ಬೆಂಬಲ ನೀಡಿದ್ದೇಕೆ..?

ಹೋಟೆಲ್‌ ಮಾಲೀಕರೆ ನಿಮ್ಮ ದಾಖಲೆ ಪ್ರದರ್ಶಿಸಿ..! ಸರ್ಕಾರದ ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದೇಕೆ..?