Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬಾಂಬ್ ಇಡಲು ಯತ್ನಿಸುತ್ತಿರುವಾಗಲೇ ಆರೋಪಿ ಕೈಯಲ್ಲಿದ್ದ ಬಾಂಬ್ ಸ್ಫೋಟ..! ಆಸ್ಪತ್ರೆಗೆ ದಾಖಲಿಸಿದರೂ ಫಲಿಸದ ಚಿಕಿತ್ಸೆ..!

809

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬ ಅಮೃತಸರದಲ್ಲಿ ಬಾಂಬ್ ಇಡಲು ಯತ್ನಿಸುತ್ತಿರುವಾಗ ಬಾಂಬ್ ಸ್ಫೋಟಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬ್‌ ನ ಅಮೃತಸರದಲ್ಲಿ ಮಂಗಳವಾರ(ಮೇ.27) ಬೆಳಗ್ಗೆ ಸ್ಫೋಟ ಸಂಭವಿಸಿದೆ. ವ್ಯಕ್ತಿ ಸಾವನ್ನಪ್ಪಿದ್ದಾನೆ.

ನಗರದ ಮಜಿತಾ ರಸ್ತೆ ಬೈಪಾಸ್‌ ನಲ್ಲಿರುವ ಡಿಸೆಂಟ್ ಅವೆನ್ಯೂ ಹೊರಗೆ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಂಬ್ ಇಡಲು ಯತ್ನಿಸುತ್ತಿದ್ದಾಗ ಆರೋಪಿಯ ಕೈಯಲ್ಲೇ ಬಾಂಬ್ ಸ್ಫೋಟಗೊಂಡಿದೆ ಎಂದು ವರದಿಗಳು ಹೇಳಿವೆ, ಆದರೆ ಪೊಲೀಸರು ಸ್ಪಷ್ಟ ಮಾಹಿತಿ ನೀಡಿಲ್ಲ.

ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆತ ಸಾವನ್ನಪ್ಪಿದ್ದಾನೆ. ಸ್ಫೋಟದ ಕಾರಣವನ್ನು ಕಂಡುಹಿಡಿಯಲು ತನಿಖೆ ಆರಂಭಿಸಲಾಗಿದೆ. ಘಟನೆಯ ನಂತರ ಪ್ರದೇಶದಲ್ಲಿ ಭೀತಿ ಆವರಿಸಿದೆ. ಆದಾಗ್ಯೂ, ಕೆಲವು ವರದಿಗಳು ಬಾಂಬ್ ಇಡುವಾಗ ಸ್ಫೋಟಗೊಂಡಿದೆ ಎಂದು ಹೇಳಿವೆ.
ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.ಸ್ಫೋಟಕಗಳ ಸರಕನ್ನು ವಶಪಡಿಸಿಕೊಳ್ಳುವ ಪ್ರಯತ್ನದ ಸಮಯದಲ್ಲಿ ಈ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ . ವ್ಯಕ್ತಿ ಯಾವುದೋ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರಬಹುದು ಎಂದು ಎಸ್‌ಎಸ್‌ಪಿ ಮಣಿಂದರ್ ಸಿಂಗ್ ತಿಳಿಸಿದ್ದಾರೆ.

ಚೇತರಿಸಿಕೊಂಡ ಬಳಿಕವೇ ವಿಚಾರಣೆ ನಡೆಸಿ ನಂತರ ಮಾಹಿತಿ ಪಡೆಯಬೇಕಿತ್ತು, ಆದರೆ ಆತ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ನವಜಾತ ಶಿಶುವನ್ನು ಎಸೆಯಲು ಹೋಗಿದ್ದ 28 ವರ್ಷದ ವ್ಯಕ್ತಿ..! ಪೊಲೀಸ್ ಕಾನ್‌ ಸ್ಟೆಬಲ್ ಸಮಯಪ್ರಜ್ಞೆಯಿಂದ ಆರೋಪಿ ಅರೆಸ್ಟ್..!

See also  ರಾತ್ರಿ ಟೋಲ್‌ ಪ್ಲಾಜಾದ ಮೇಲೆ ಬಂದೂಕುಧಾರಿಗಳ ದಾಳಿ..! ತಪ್ಪಿಸಲು ಓಡಿದ ಟೋಲ್ ಸಿಬ್ಬಂದಿ ಬಾವಿಗೆ ಬಿದ್ದು ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget