ವೈರಲ್ ನ್ಯೂಸ್

ಬಾಂಬ್ ಸ್ಫೋಟ, ಸ್ವಲ್ಪದರಲ್ಲೇ ನಟಿ ಸನ್ನಿ ಲಿಯೋನ್ ಬಚಾವ್‌..!

ನ್ಯೂಸ್ ನಾಟೌಟ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಬಾಂಬ್ ಸ್ಫೋಟವೊಂದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಮಣಿಪುರದ ಇಂಪಾಲ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೂ ಮೊದಲು ಇಂಪಾಲ್‌ನಲ್ಲಿ ನಟಿ ಸನ್ನಿ ಲಿಯೋನ್ ಫ್ಯಾಶನ್ ಶೋ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಿತ್ತು.

ಇಂಪಾಲ್‌ನ ಹಟ್ಟ ಕಂಜೇಲ್‌ಬಂಗ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಯಾರಿಗೂ ಗಾಯಗಳಾದ ಬಗ್ಗೆ ವರದಿ ಆಗಿಲ್ಲ. ಫ್ಯಾಶನ್ ಶೋ ನಡೆಯಬೇಕಿದ್ದ ಸ್ಥಳದಿಂದ ಕೇವಲ 100 ಮೀ. ದೂರದಲ್ಲಿ ಶನಿವಾರ ಸ್ಫೋಟ ಸಂಭವಿಸಿದೆ. ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಸಹ ಭಾಗವಹಿಸಬೇಕಿತ್ತು. ಸುಧಾರಿತ ಸ್ಫೋಟಕ ಅಥವಾ ಗ್ರೆನೇಡ್ ಯಾವುದರಿಂದ ಸ್ಪೋಟ ಸಂಭವಿಸಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

Related posts

ನಾನು ಆತನ ಜೊತೆಗೆ ಮಲಗಿದ್ದರೆ ಇಂದು 30 ಚಿತ್ರಗಳನ್ನು ಪೂರೈಸುತ್ತಿದ್ದೆ’..! ಸ್ಪೋಟಕ ಹೇಳಿಕೆ ನೀಡಿದ ನಟಿ ಯಾರು?

ಪತಿ ಮತ್ತು 6 ಮಕ್ಕಳನ್ನು ಬಿಟ್ಟು ಭಿಕ್ಷುಕನ ಜೊತೆ ಪರಾರಿಯಾದ ಮಹಿಳೆ..! ಈ ಬಗ್ಗೆ ಆಕೆಯ ಗಂಡ ಹೇಳಿದ್ದೇನು..?

ಬಿಜೆಪಿಗೆ ವಿರೋಧ ಪಕ್ಷದ ನಾಯಕರು ಬೇಕಾಗಿದ್ದಾರೆ..! ವೈರಲ್ ಪೋಸ್ಟ್‌ನಿಂದ ಬಿಜೆಪಿಗರಿಗೆ ಮುಜುಗರ..!