ಕ್ರೀಡೆ/ಸಿನಿಮಾವೈರಲ್ ನ್ಯೂಸ್

‘ಬಾಲಿವುಡ್ ಬಾದ್ ಶಾ’ ನಟ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ನಮ್ಮ KGF ಖ್ಯಾತಿಯ ನಟ ಯಶ್..? ಯಾವುದು ಆ ಸಿನಿಮಾ? ಇಲ್ಲಿದೆ ಫುಲ್ ಡಿಟೇಲ್ಸ್

ನ್ಯೂಸ್‌ ನಾಟೌಟ್: ಜವಾನ್ ಸಿನಿಮಾ ಸೆ.7ನೇ ತಾರೀಖು ವಿಶ್ವಾದ್ಯಂತ ತೆರೆಕಾಣಲಿದ್ದು, ಜವಾನ್ ಸಿನಿಮಾ ಹಿಂದಿ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

ಜವಾನ್ ಸಿನಿಮಾ ಕುತೂಹಲ ಹುಟ್ಟುಸಿರುವ ಕಾರಣ ಬೇರೆಯೇ ಇದೆ, ಶಾರುಖ್ ಸಿನಿಮಾಕ್ಕೆ ಮತ್ತು ಸ್ಯಾಂಡಲ್ ವುಡ್ ಗೂ ವಿಶೇಷ ನಂಟು ಬೆಳೆದಿದೆ.
ಈ ಹಿಂದೆ ಶಾರುಖ್ ಖಾನ್(Shah Rukh Khan) ‘ಜೀರೋ’ ಎಂಬ ಸಿನಿಮಾ ರಿಲೀಸ್ ಆದಾಗ ಅದರ ಎದುರಲ್ಲೆ ರಿಲೀಸ್ ಆದ ಯಶ್ ಕೆಜಿಎಫ್ ಗೆದ್ದು ಬೀಗಿತ್ತು. ಶಾರುಖ್ ಖಾನ್ ಅಂತ ಸೂಪರ್ ಸ್ಟಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೀರೋ ಆಗಿತ್ತು. ಯಶ್ ಹೀರೋ ಆಗಿದ್ದ ಕೆಜಿಎಫ್ ನೂರಾರು ಕೋಟಿ ಕಲೆಕ್ಷನ್ ಮಾಡಿತ್ತು.

ಆಗಲೂ ಯಶ್ ನಾನು ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ ಎಂದಿದ್ದರು. ಇತ್ತ ಶಾರುಖ್ ಖಾನ್ ಕೂಡ ಯಶ್ ಬಗ್ಗೆ ರಾಕಿಭಾಯ್(Raki bhai Yash) ಎಂದೇ ಉದ್ಗರಿಸಿದ್ದರು. ಬಾಲಿವುಡ್‌ನಲ್ಲಿ ಎಲ್ಲ ಸ್ಟಾರ್‌ಗಳು ಯಶ್ ಸಿನಿಮಾದತ್ತ ಒಮ್ಮೆಲೆ ತಿರುಗಿನೋಡಿದ್ದರು. ಕನ್ನಡ ಹೀರೋ.. ಕನ್ನಡ ಸಿನಿಮಾ ಈ ಮಟ್ಟಿಗೆ ಸದ್ದು ಪ್ರಭಾವ ಬೀರಿತ್ತು. ನಮ್ ಅಣ್ತಮ್ಮ ಯಶ್ ರೇಂಜೆ ಬದಲಾಗಿ ಹೋಯ್ತು.

ಇದೀಗ ಶಾರುಖ್ ಖಾನ್ ಜವಾನ್ (Jawan) ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಅಟ್ಲಿ ನಿರ್ದೇಶನದ, ಅನಿರುದ್ ಸಂಗೀತ, ನಯನತಾರ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಜವಾನ್ ಗೆ ಸೌತ್‌ನ ಸಿನಿಮಾ ಇಂಡಸ್ಟ್ರಿಯ ಬಹುತೇಕ ಸಾಥ್ ಸಿಕ್ಕಿದೆ. ಇದೀಗ ಶಾರುಖ್ ಖಾನ್ ಜವಾನ್ ಜೊತೆ ರಾಕಿಭಾಯ್ ಯಶ್ ಕೂಡ ನಟಿಸಲಿದ್ದಾರೆ ಎನ್ನುವ ಸುದ್ದಿ ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಈ ಬಗೆಗಿನ ಅಧಿಕೃತ ಅಪ್ಡೇಟ್ ಇನ್ನಷ್ಟೇ ದೊರೆಯಬೇಕಿದೆ.

Related posts

ಮಂಗಳೂರು:ಎಳನೀರು ಕುಡಿದು 15 ಮಂದಿ ಅಸ್ವಸ್ಥ..! ಎಳನೀರು ಮತ್ತು ಐಸ್ ಕ್ರೀಮ್ ಮಾರಾಟ ಸಂಸ್ಥೆಯಿಂದ ಖರೀದಿ

ಮೂಗ-ಕಿವುಡ ಮಹಿಳೆಯನ್ನು ಬಾತ್ ರೂಮ್ ನಲ್ಲಿ ಕಟ್ಟಿ ಹಾಕಿ ಯುವಕನಿಂದ ಬಲತ್ಕಾರ..! ಪತ್ನಿಯನ್ನು ಕಂಡು ಕಣ್ಣೀರಿಟ್ಟ ಮೂಗ ಪತಿ..! ಏನಿದು ಕರುಣಾಜನಕ ಕಥೆ

ಎಮ್ಮೆ, ಕೋಣಗಳನ್ನು ಕಡಿಯುವುದಾದರೆ ಗೋವನ್ನು ಏಕೆ ಹತ್ಯೆ ಮಾಡಬಾರದು ಎಂದಿದ್ದ ಸಚಿವರು ಈಗ ಯೂಟರ್ನ್..! ಗೋಹತ್ಯೆ ನಿಷೇಧ ಹಿಂಪಡೆಯುವ ಬಗ್ಗೆ ಪಶುಸಂಗೋಪನೆ ಸಚಿವರು ಹೇಳಿದ್ದೇನು?