ಕೊಡಗುಕ್ರೀಡೆ/ಸಿನಿಮಾದೇಶ-ಪ್ರಪಂಚ

ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಮತ್ತೆ ಲಿಪ್ ಲಾಕ್..! ಈ ಸಲ ಬಾಲಿವುಡ್ ನಟನ ಜೊತೆಗೆ ಕಿಸ್ಸಿಂಗ್..! ಏನಿದು ವಿಚಾರ ಇಲ್ಲಿದೆ ಡಿಟೇಲ್ಸ್

ನ್ಯೂಸ್ ನಾಟೌಟ್: ನಟಿ ಕೊಡಗಿನ ರಶ್ಮಿಕಾ ಮಂದಣ್ಣ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಿರ್ದೇಶಕ, ನಟ ರಕ್ಷಿತ್ ಶೆಟ್ಟಿ ಜೊತೆಗಿನ ಮದುವೆಯ ವದಂತಿಗಳಿಂದ ಸುದ್ದಿಯಾಗಿದ್ದ ಅವರು ನಂತರ ತೆಲುಗು ಸಿನಿಮಾ ಇಂಡೆಸ್ಟ್ರಿನಲ್ಲಿ ಮಿಂಚಿದ್ದರು. ಇದೀಗ ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಲಿಪ್ ಟು ಲಿಪ್ ಕಿಸ್ಸಿಂಗ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಭಾರಿ ಸುದ್ದಿಯಾಗಿದ್ದ ರಶ್ಮಿಕಾ ಮಂದಣ್ಣ ಈಗಿನ ಅವಾತಾರದಿಂದ ಲಿಟ್ಲ್ ಬಿಟ್ ಕನ್ ಫ್ಯೂಸ್ ಆಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ಕಿಸ್ಸಿಂಗ್​ ಸೀನ್​ಗಳು ಹೊಸದೇನೂ ಅಲ್ಲ. ಈ ಮೊದಲು ಅವರು ‘ಗೀತ ಗೋವಿಂದಂ’, ‘ಡಿಯರ್​ ಕಾಮ್ರೇಡ್​’ ಸಿನಿಮಾಗಳಲ್ಲಿ ವಿಜಯ್​ ದೇವರಕೊಂಡ ಜೊತೆ ಚುಂಬನದ ದೃಶ್ಯಗಳಲ್ಲಿ ನಟಿಸಿದ್ದರು. ಈಗ ರಣಬೀರ್​ ಕಪೂರ್​ ಜೊತೆ ‘ಅನಿಮಲ್​’ ಸಿನಿಮಾಗಾಗಿ ಲಿಪ್​ ಕಿಸ್​ ಮಾಡಿದ್ದಾರೆ. ಅಕ್ಟೋಬರ್​ 11ರಂದು ಈ ಸಿನಿಮಾದ ಹಾಡು ಬಿಡುಗಡೆ ಆಗಲಿದೆ. ಇದೇ ಹಾಡಿನಲ್ಲಿ ಲಿಪ್​ ಲಾಕ್​ ದೃಶ್ಯ ಇರಲಿದೆ.

ಹಲವು ಬಹುನಿರೀಕ್ಷಿತ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸುತ್ತಿದ್ದಾರೆ. ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ (Animal Movie) ಸಿನಿಮಾಗೂ ಅವರೇ ನಾಯಕಿ. ಈ ಸಿನಿಮಾ ಮೂಲಕ ಅವರು ಬಾಲಿವುಡ್​ನಲ್ಲಿ ದೊಡ್ಡ ಯಶಸ್ಸು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್​ 1ರಂದು ‘ಅನಿಮಲ್​’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಮೊದಲು ರಿಲೀಸ್​ ಆಗಿದ್ದ ಟೀಸರ್​ ಗಮನ ಸೆಳೆದಿತ್ತು. ಈಗ ಹಾಡಿನ ಬಿಡುಗಡೆಗೆ ಸಮಯ ನಿಗದಿ ಆಗಿದೆ. ಅದನ್ನು ತಿಳಿಸುವ ಸಲುವಾಗಿ ಒಂದು ಹೊಸ ಪೋಸ್ಟರ್​ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ರಣಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ಅವರು ಲಿಪ್​ ಲಾಕ್​ (Lip Lock) ಮಾಡಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಅನಿಮಲ್​’ ಸಿನಿಮಾ ಬಿಡುಗಡೆ ಆಗುತ್ತಿದೆ. ಹಿಂದಿ, ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡದಲ್ಲಿ ಈ ಚಿತ್ರ ತೆರೆಕಾಣಲಿದೆ. ಈ ಎಲ್ಲ ಭಾಷೆಯಲ್ಲೂ ಅ.11ರಂದು ಹಾಡು ಬಿಡುಗಡೆ ಆಗಲಿದೆ. ಕನ್ನಡದಲ್ಲಿ ‘ಓಹ್​ ಬಾಲೆ..’ ಎಂಬ ಈ ಗೀತೆಯನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ರಣಬೀರ್​ ಕಪೂರ್​ ಜೊತೆ ಅನಿಲ್​ ಕಪೂರ್​, ಬಾಬಿ ಡಿಯೋಲ್​, ತೃಪ್ತಿ ದಿಮ್ರಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

Related posts

ಮುಖಕ್ಕೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಯುವಕ..! ಆರೋಪಿ ಅಮ್ಜದ್ ನನ್ನು ಬಂಧಿಸಿದ ಪೊಲೀಸರು..! ಇಲ್ಲಿದೆ ವೈರಲ್ ವಿಡಿಯೋ

ಅಸಲಿ ಸುದ್ದಿಗೆ ಸುಳ್ಳು ಸುದ್ದಿ ಹಣೆಪಟ್ಟಿ, ನ್ಯೂಸ್ ನಾಟೌಟ್ ವೆಬ್ ಸೈಟ್ ಗೆ ಬಿಟ್ಟಿ ಪ್ರಚಾರ ಕೊಟ್ಟ ಯೂ ಟ್ಯೂಬ್ ಚಾನಲ್

ಮಡಿಕೇರಿ:’ಜೀವನದಾರಿ’ ವೃದ್ಧಾಶ್ರಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಮಂತರ್‌ ಗೌಡ,ಸಮಾಜ ಸೇವಕ ರಮೇಶ್ ಮತ್ತು ರೂಪ ದಂಪತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ