ಕರಾವಳಿಕೊಡಗು

ಪುಷ್ಪ-2 ಚಿತ್ರದಲ್ಲಿಯೂ ರಶ್ಮಿಕಾನೇ ಹಿರೋಯಿನ್,ಕೊಡಗಿನ ಬೆಡಗಿ ಈ ಕುರಿತು ಏನು ಹೇಳಿದ್ದಾರೆ ನೋಡಿ..

460

ನ್ಯೂಸ್ ನಾಟೌಟ್ :’ಕಿರಿಕ್ ಪಾರ್ಟಿ’ ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಏನಾದರೊಂದು ಮಾತಾಡಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.ಇದೀಗ ಇವರ ವಾರಿಸು ಚಿತ್ರ ತೆರೆ ಕಂಡಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿದೆ. ವರ್ಷದ ಆರಂಭದಲ್ಲೇ ‘ವಾರಿಸು ಮೂಲಕ ಬ್ರೇಕ್ ಪಡೆದುಕೊಂಡ ರಶ್ಮಿಕಾ ಸ್ವಲ್ಪ ಚೇತರಿಸಿಕೊಂಡಂತಿದೆ. ವಿಶ್ವದೆಲ್ಲೆಡೆ ದಳಪತಿ ವಿಜಯ್ ‘ವಾರಿಸು’ ಸಖತ್ ಸದ್ದು ಮಾಡುತ್ತಿದೆ.ಟಾಲಿವುಡ್ ನ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅವರ ‘ಪುಷ್ಪ’ ಪಾರ್ಟ್ -1 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಿತ್ತು.ಶ್ರೀವಲ್ಲಿಯಾಗಿ ರಶ್ಮಿಕಾ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಸುಕುಮಾರ್ ಅವರ ‘ಪುಷ್ಪ-2’ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟಿಸಿದೆ.

ಚಿತ್ರದ ಬಗ್ಗೆ ರಶ್ಮಿಕಾ ಹೇಳಿದ್ದೇನು?

ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಇತ್ತೀಚೆಗೆ ಪುಷ್ಪ ಸೀಕ್ವೆಲ್ ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ತೆಗೆದು ಹಾಕಲಾಗಿದೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಸಾಯಿ ಪಲ್ಲವಿ ಅವರು ರಶ್ಮಿಕಾ ಜಾಗದಲ್ಲಿ ಇದ್ದಾರೆ ಎಂಬ ಮಾತು ಕೇಳಿ ಬಂದಿತ್ತು.ಆದರೆ ಈ ಎಲ್ಲದಕ್ಕೂ ರಶ್ಮಿಕಾ ಅವರು ಒಂದೇ ಮಾತಿನಲ್ಲಿ ಉತ್ತರಿಸಿದ್ದಾರೆ. ಇಂಡಿಯಾ ಟುಡೇ ಜತೆ ಮಾತಾನಾಡಿರುವ ಅವರು ‘ಮುಂದಿನ ತಿಂಗಳು ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದೇನೆ. ಪುಷ್ಪ-2 ನಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ” ಎಂದಿದ್ದಾರೆ.ಸದ್ಯ ಸಿದ್ದಾರ್ಥ್ ಮಲ್ಲೋತ್ರ ಅವರೊಂದಿಗೆ ನಟಿಸಿರುವ ‘ಮಿಷನ್ ಮಜ್ಜು’ ಸಿನಿಮಾದ ಪ್ರಚಾರದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಜ.20 ರಂದು ನೆಟ್ ಫ್ಲಿಕ್ಸ್ ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

See also  ನಾಳೆ ಎರಡನೇ ಮದುವೆಯಾಗಲಿರುವ ಪಂಜಾಬ್ ಸಿಎಂ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget