ಕ್ರೀಡೆ/ಸಿನಿಮಾ

ಹೊಟ್ಟೆ ಕಾಣದಂತೆ ದುಪ್ಪಟ್ಟ ಅಡ್ಡ ಹಿಡಿದುಕೊಂಡಿದ್ದೇಕೆ ನಟಿ ಕತ್ರಿನಾ ಕೈಫ್?ಪ್ರೆಗ್ನೆನ್ಸಿ ವದಂತಿ..ವಿಡಿಯೋ ವೈರಲ್..

175

ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಕ್ರಿಕೆಟರ್ ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.ಇದೀಗ ನಟಿ ಕತ್ರಿನಾ ಕೈಫ್ ಬಗ್ಗೆಯೂ ಹೀಗೊಂದು ವದಂತಿ ಎದ್ದಿದೆ.

ಹೌದು ಕತ್ರಿನಾ ಕೈಫ್(Katrina Kaif)​ ಮತ್ತು ವಿಕ್ಕಿ ಕೌಶಲ್​ (Vicky Kaushal) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ವರ್ಷ ಕಳೆಯುತ್ತಿದೆ. ಈಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಅನೇಕರು ಊಹಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಕತ್ರಿನಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ.ಜತೆಗೆ  ಪ್ರೆಗ್ನೆಂಟ್​ (Katrina Kaif Pregnant) ಆಗಿರುವ ಕಾರಣದಿಂದಲೇ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊನ್ನೆಯಷ್ಟೇ ಹೈದರಾಬಾದ್​ಗೆ ಬಂದಿದ್ದ ಅವರು ಸಲ್ವಾರ್ ಧರಿಸಿದ್ದರು. ಈ ವೇಳೆ ಕತ್ರಿನಾ ಹೊಟ್ಟೆ ಕಾಣದ ರೀತಿಯಲ್ಲಿ ದುಪ್ಪಟ್ಟ ಮುಚ್ಚಿಕೊಂಡಿದ್ದರು. ಆ ವಿಡಿಯೋ ಸದ್ಯ ಎಲ್ಲೆಡೆ ವೈರಲ್​ ಆಗಿದೆ.ನಟಿಯರ ಬೇಬಿ ಬಂಪ್​ ಕಾಣಿಸಿದರೆ ಪ್ರೆಗ್ನೆನ್ಸಿ ಸುದ್ದಿ ಎಲ್ಲ ಕಡೆ ಬೇಗನೇ ಹಬ್ಬುತ್ತದೆ. ಕತ್ರಿನಾ ಕೈಫ್​ ಅವರು ಅದೇ ಕಾರಣಕ್ಕಾಗಿ ದುಪ್ಪಟ್ಟ ಮುಚ್ಚಿಕೊಂಡು ಹೊಟ್ಟೆ ಕಾಣದ ರೀತಿಯಲ್ಲಿ ನಡೆದು ಹೋಗಿದ್ದಾರೆಯೇ ಎನ್ನುವ ಪ್ರಶ್ನೆಗಳು ಜನರಲ್ಲಿ ಎದ್ದಿವೆ.

ಈ ವಿಡಿಯೋ ನೋಡಿದ ನೆಟ್ಟಿಗರು ಒಂದು ವೇಳೆ ಅವರು ಗರ್ಭಿಣಿ ಆಗಿರುವುದು ನಿಜವೇ ಆಗಿದ್ದರೆ ಅವರಿಗೆ ಅಭಿನಂದನೆಗಳು ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ.ಈಗೀಗ ಕತ್ರಿನಾ ಕೈಫ್​ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಅವರು ಹಿಂದೇಟು ಹಾಕುತ್ತಿದ್ದಾರೆ. ಮಗು ಪಡೆದು, ಸಂಸಾರದ ಕಡೆಗೆ ಹೆಚ್ಚು ಗಮನ ನೀಡುವ ಸಲುವಾಗಿಯೇ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಗುಮಾನಿ ವ್ಯಕ್ತವಾಗಿದೆ.

See also  ಶುಭಮನ್ ಗಿಲ್ & ಸಾರಾ ತೆಂಡೂಲ್ಕರ್ ಇನ್ಸ್ಟಾಗ್ರಾಮ್ ನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ಯಾಕೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget