ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಕ್ಯಾನ್ಸರ್ ಪೀಡಿತ ಮಹಿಳೆಯ ಕೊನೆ ಆಸೆ ಈಡೇರಿಸಿದ ಬಾಲಿವುಡ್ ನಟ! ಕರೆ ಮಾಡಿ ಶಾರುಖ್ ಖಾನ್ ಹೇಳಿದ್ದೇನು?

ನ್ಯೂಸ್ ನಾಟೌಟ್: ಬಾಲಿವುಡ್ ನಟ ಶಾರುಖ್ ಖಾನ್ ಕ್ಯಾನ್ಸರ್ ಪೀಡಿತ ಮಹಿಳಾ ಅಭಿಮಾನಿಯೊಬ್ಬರಿಗೆ ವೀಡಿಯೊ ಕರೆ ಮಾಡಿ ಸುಮಾರು 30 ನಿಮಿಷಗಳ ಕಾಲ ಮಾತನಾಡಿ ಅವರ ಕೊನೆಯಾಸೆಯೊಂದನ್ನು ಈಡೇರಿಸಿದ್ದಾರೆ ಎಂದು ಬುಧವಾರ ವರದಿಯಾಗಿದೆ.

ಕೊನೆಗೂ ಅಭಿಯಾನದ ಕೋರಿಕೆಗೆ ಶಾರುಖ್ ಖಾನ್ ಸ್ಪಂದಿಸಿದ್ದಾರೆ. ವೀಡಿಯೊ ಕರೆ ಮೂಲಕ ಶಿವಾನಿ ಚಕ್ರವರ್ತಿ ಅವರ ಜೊತೆ ಸುಮಾರು 30 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಕುರಿತು ಪ್ರಿಯಾ ಚಕ್ರವರ್ತಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ತಾಯಿ ಪೂರ್ಣ ಗುಣಮುಖರಾಗಲಿ ಎಂದು ಶಾರುಖ್ ಖಾನ್ ಪ್ರಾರ್ಥಿಸಿದ್ದಾರೆ. ನನ್ನ ತಾಯಿಗಾಗಿ ದುವಾ ಓದಿದರು. ನನ್ನ ಮದುವೆಗೆ ಬರುವುದಾಗಿ ತಾಯಿಗೆ ಭರವಸೆ ನೀಡಿದ್ದಾರೆ. ಅಲ್ಲದೆ ಕೋಲ್ಕತ್ತಾಗೆ ಭೇಟಿ ನೀಡಿದ ವೇಳೆ ತಾಯಿ ಮಾಡಿದ ಮೀನು ಸಾರು ಸವಿಯುವುದಾಗಿ  ಹೇಳಿದ್ದಾರೆ ಎಂದು ಪ್ರಿಯಾ ಚಕ್ರವರ್ತಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕ್ಯಾನ್ಸರ್ ಪೀಡಿತ ಅಭಿಮಾನಿಯ ಜೊತೆ ಶಾರುಖ್ ಖಾನ್ ಮಾತನಾಡಿರುವ ವಿಷಯ ತಿಳಿದು ಅವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

Related posts

ಸುಳ್ಯ: ಬ್ಯಾಂಕ್ ಆಫ್ ಬರೋಡಾ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್, ರೋಚಕ ಫೈನಲ್ ನಲ್ಲಿ ಮುಗ್ಗರಿಸಿದ ಯೇನೆಪೋಯ ಯೂನಿವರ್ಸಿಟಿ

ಅಧಿಕಾರಿ ಜೈಲಿಗೆ ತಪಾಸಣೆಗೆ ಬಂದಾಗ ಮೊಬೈಲ್‌ ನುಂಗಿದ ಕೈದಿ..! ಮುಂದಾದದ್ದು ದೊಡ್ಡ ಅನಾಹುತ..!

ಮಾರ್ಗದ ಮಧ್ಯೆ ಕೆಟ್ಟು ನಿಂತ 535 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ಟ್ರಕ್‌..!