ಕ್ರೈಂಬೆಂಗಳೂರುವಿಡಿಯೋವೈರಲ್ ನ್ಯೂಸ್

ಸರ್ಕಾರಿ ಬಸ್‌ ನೊಳಗೆ ಕಂಡಕ್ಟರ್ ಗೆ ಚಾಕು ಇರಿದ ಯುವಕ..! ಭಯಭೀತರಾಗಿ ಬಸ್ಸಿನಿಂದ ಇಳಿದು ಓಡಿದ ಪ್ರಯಾಣಿಕರು..! ಇಲ್ಲಿದೆ ವೈರಲ್ ವಿಡಿಯೋ

240

ನ್ಯೂಸ್‌ ನಾಟೌಟ್‌: ಬಿಎಂಟಿಸಿ ಬಸ್ ಕಂಡಕ್ಟರ್ ಒಬ್ಬರಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಬೆಂಗಳೂರಿನ ವೈಟ್‌ ಫೀಲ್ಡ್‌ ನಲ್ಲಿ ಮಂಗಳವಾರ(ಅ.2) ನಡೆದಿದೆ. ಸದ್ಯ ಕಂಡಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ವೈಟ್‌ ಫೀಲ್ಡ್‌ ಘಟಕದ ಬಿಎಂಟಿಸಿ ವೋಲ್ವೊ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹರ್ಷ ಸಿನ್ಹ್ ಎಂಬ ಜಾರ್ಖಂಡ್ ಮೂಲದ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್‌ಗೆ ಇರಿದಿದ್ದಾನೆ. ನಂತರ ಅಲ್ಲಿಯೇ ನಿಂತು ಚಾಕು ಪ್ರದರ್ಶಿಸಿದ್ದಾನೆ. ಭಯಭೀತರಾಗಿ ಸಹ ಪ್ರಯಾಣಿಕರು ಬಸ್ಸಿನಿಂದ ಇಳಿದು ಹೋಗಿದ್ದಾರೆ.

ಯುವಕ ಚಾಕು ಹಿಡಿದು ಬಸ್ಸಿನಲ್ಲಿ ನಿಂತಿದ್ದ ಪೋಟೋ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅನೇಕರು ಯುವಕನ ಕೃತ್ಯ ಖಂಡಿಸಿದ್ದಾರೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಈ ವಿಡಿಯೊ ಹಂಚಿಕೊಂಡು ಬಿಎಂಟಿಸಿ ಅವರು ಇನ್ನೂ ಏಕೆ ದೂರು ದಾಖಲಿಸಿಲ್ಲ ಎಂದು ಕಿಡಿಕಾರಿದ್ದಾರೆ. ಅನೇಕ ಉತ್ತರ ಭಾರತೀಯರು ಬೆಂಗಳೂರಿಗೆ ವಲಸೆ ಬಂದು ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲ ವರದಿಗಳ ಪ್ರಕಾರ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದ ಯುವಕ ಮಾನಸಿಕ ವರ್ತನೆ ಮೇಲೆ ನಿಗಾ ಕಳೆದುಕೊಂಡು ಹೀಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

See also  2 ವರ್ಷದ ಪ್ರೀತಿ 2 ನಿಮಿಷದಲ್ಲಿ ದುರಂತ ಅಂತ್ಯ..! ಯುವತಿಯನ್ನು ಕೊಂದು ಮಣ್ಣಲ್ಲಿ ಹೂತಿಟ್ಟ ಯುವಕ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget