ಕ್ರೈಂಬೆಂಗಳೂರು

ನಡುರಸ್ತೆಯಲ್ಲೇ ಹೊತ್ತಿ ಉರಿದ ಸರ್ಕಾರಿ ಬಸ್..! ಬಸ್ ನೊಳಗಿದ್ದ 30 ಜನ ಬದುಕಿದ್ದೇಗೆ..?

ನ್ಯೂಸ್ ನಾಟೌಟ್: ಬೆಳ್ಳಂಬೆಳಗ್ಗೆ ಬೆಂಗಳೂರು ಮಹಾನಗರ ಸಾರಿಗೆ(BMTC) ಬಸ್ ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ. ಈ ಘಟನೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ನಡೆದಿದೆ. ಬಸ್​ನಲ್ಲಿ 30 ಜನ ಪ್ರಯಾಣಿಸುತ್ತಿದ್ದರೂ ಯಾರಿಗೂ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಿಎಂಟಿಸಿ ಬಸ್​ ರೋಸ್​ ಗಾರ್ಡನ್​ನಿಂದ ಶಿವಾಜಿನಗರಕ್ಕೆ ಬರುತ್ತಿತ್ತು. ಮಾರ್ಗ ಮಧ್ಯೆ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸಿಗ್ನಲ್ ​ನಲ್ಲಿ ಚಾಲಕ ಬಸ್ ಬಂದ್​ ಮಾಡಿದ್ದರು. ಮತ್ತೆ ಸ್ಟಾರ್ಟ್ ಆಗಿಲ್ಲ. 2-3 ಸಲ ಸ್ಟಾರ್ಟ್ ಮಾಡಲು ಯತ್ನಿಸಿದ್ದಾರೆ. ಆದರೆ, ಸ್ಟಾರ್ಟ್​ ಆಗಲಿಲ್ಲ. ಈ ವೇಳೆ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಕೆಲವೇ ಕ್ಷಣದಲ್ಲಿ ಬಸ್ ಸುಟ್ಟು ಭಸ್ಮವಾಗಿದೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/07/one8-commune-pub-virat-kohili-kannada-news-bengaluru-fir
https://newsnotout.com/2024/07/mangaluru-theft-kannada-news-car-found-in-mulki-police-investigation
https://newsnotout.com/2024/07/russia-and-india-indians-are-free-from-russia-army-kannada-news-modi

Related posts

ಸುಪ್ರೀಂ ಕೋರ್ಟ್​ನ ಮೊದಲ ಮಹಿಳಾ ನ್ಯಾಯಮೂರ್ತಿ ನಿಧನ! ಯಾರೀ ಫಾತಿಮಾ ಬೀವಿ..?

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ಪ್ರಕರಣ, ಸಿಡಿ ಒದಗಿಸುವಂತೆ ಹೈ ಕೋರ್ಟ್ ಸೂಚನೆ

ಚುನಾವಣೆಗೆ ಹಣ, ಅಮಲಿದ್ದೇ ಕಾರ್ ಬಾರು..! ಇಲ್ಲಿವರೆಗೆ ನಗದು, ಮದ್ಯ ಸೇರಿ ಒಟ್ಟು 4,658 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ..!